ಯತ್ನಾಳ್ ಕರ್ನಾಟಕ ಸಿಎಂ ಆಗಲಿ :  ಲಾಗೈಡ್ ವೆಂಕಟೇಶ್ ಹಾರೈಕೆ

Yatnal should become Karnataka CM: Law guide Venkatesh's wish

 

ಮೈಸೂರು, ನ.೧೯,೨೦೨೫: ಸದ್ಯದ ಪರಿಸ್ಥಿತಿಯಲ್ಲಿ ದೇಶಕ್ಕೆ, ರಾಜ್ಯಕ್ಕೆ ಯತ್ನಾಳ್ ಅಂತವರ ಅವಶ್ಯಕತೆ ಇದೆ. ಸನಾತನ ಧರ್ಮ ಅಳಿವಿನಂಚಿನಲ್ಲಿದೆ. ಅದನ್ನು ಪ್ರಶ್ನೆ ಮಾಡುವವರೇ ಇಲ್ಲದಂತಾಗಿದೆ ಎಂದು ಹಿರಿಯ ವಕೀಲ ಎಚ್.ಎನ್.ವೆಂಕಟೇಶ್‌ ಅಭಿಪ್ರಾಯಪಟ್ಟರು.

ಹಿಂದೂ ಜಾಗೃತಾ ವೇದಿಕೆ ವತಿಯಿಂದ ನಗರದ ಕಲಾ ಮಂದಿರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ ಗೌರವ ಸಂಪಾದಕ ಹಾಗೂ ಹಿರಿಯ ವಕೀಲ ಎಚ್ ಎನ್ ವೆಂಕಟೇಶ್‌ ಹೇಳಿದಿಷ್ಟು..

ದೇಶದಲ್ಲಿ ಒಂದು ಕಡೆ ಒಂದು ಧರ್ಮದ ವಿದ್ಯಾವಂತರು, ವೈದ್ಯರೇ ಬಾಂಬ್ ಇಡುವ ಕೆಲಸ ಮಾಡುತ್ತಿದ್ದಾರೆ. ಇದನ್ನು ತಡೆಯುವುದಕ್ಕೆ , ಅಂತಹವರನ್ನು ದೂರ ಇಡಲು ಯತ್ನಾಳ್ ಅಂತಾ ನಾಯಕರು ದೇಶಕ್ಕೆ ಬೇಕಾಗಿದ್ದಾರೆ. ಇಂತವರು ದೇಶದಲ್ಲಿ ಹೆಚ್ಚು ಜನ ಹುಟ್ಟಬೇಕು. ಅನ್ಯ ಧರ್ಮದ ವೈದ್ಯರ ಬಗ್ಗೆ ಅನುಮಾನ ಮೂಡುವಂತ ಪರಿಸ್ಥಿತಿ ಇದೆ.  ಕೆಲವರಿಗೆ ಆರ್ ಎಸ್ ಎಸ್ ಟೀಕೆ‌ ಮಾಡುವುದೇ ಪ್ರಮುಖ ಉದ್ದೇಶ ಆಗಿದೆ. ಇದು ನಿಲ್ಲಬೇಕು. ಇದೆಲ್ಲಾ ನಿಲ್ಲಬೇಕಾದರೆ ಯತ್ನಾಳ್ ಅವರು ಈ ರಾಜ್ಯ ಸಿಎಂ ಆಗಬೇಕು ಎಂದು ಹಾರೈಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭಾಗಿಯಾಗಿದ್ದರು‌. ಯೋಗಾನರಸಿಂಹ ಸ್ಟಾಮಿ ದೇಗುಲದ ಡಾ ಭಾಷ್ಯಂ ಸ್ವಾಮೀಜಿ, ಹಿರಿಯ ವಕೀಲ ಎಂ ಡಿ ಹರೀಶ್ ಕುಮಾರ್ ಹೆಗ್ಡೆ, ಮಲ್ಲೇಶ್, ಭಾಸ್ಕರ್ ನಾಯ್ಡು, ಸೇರಿದಂತೆ ಹಲವರು ಭಾಗಿಯಾಗಿದ್ದರು.

key words: Yatnal, should become Karnataka CM, Law guide Venkatesh, Mysore

Yatnal should become Karnataka CM: Law guide Venkatesh’s wish