Friday, September 18, 2026

BDA Apartments

Home Front Page ‘ಲಾ ಗೈಡ್’ ಕಾನೂನು ಮಾಸಪತ್ರಿಕೆ ಬಳಗದಿಂದ ಉಚಿತ ಕಾನೂನು ಪುಸ್ತಕಗಳ ವಿತರಣೆ

‘ಲಾ ಗೈಡ್’ ಕಾನೂನು ಮಾಸಪತ್ರಿಕೆ ಬಳಗದಿಂದ ಉಚಿತ ಕಾನೂನು ಪುಸ್ತಕಗಳ ವಿತರಣೆ

ಮೈಸೂರು.ಜುಲೈ,4,2024 (www.justkannada.in): ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ ಬಳಗದ ವತಿಯಿಂದ ವಕೀಲರ ಉಪಯೋಗಕ್ಕಾಗಿ ಉಚಿತವಾಗಿ ಕಾನೂನು ಪುಸ್ತಕಗಳ ವಿತರಣೆ ಮಾಡಲಾಯಿತು.

ಮೈಸೂರು ವಕೀಲರ ಸಂಘದ ಆವರಣದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಹಿರಿಯ ವಕೀಲರಾದ ಲಾ ಗೈಡ್ ಹೆಚ್. ಎನ್ ವೆಂಕಟೇಶ್ ಅವರು ಉಚಿತ ಕಾನೂನು ಪುಸ್ತಕಗಳ ವ್ಯವಸ್ಥೆ ಮಾಡಿದ್ದರು.  ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಸತ್ರ ನ್ಯಾಯಾಧೀಶರಾದ ರವೀಂದ್ರ ಹೆಗ್ಡೆ, ನ್ಯಾಯಾಧೀಶರಾದ ಪುಟ್ಟಸ್ವಾಮಿ,  ಪಿ.ಜೆ ಸೋಮಶೇಖರ್,  ಸಾವಿತ್ರಿ, ಶಿವಪುತ್ರ ಕುಜ್ಜಿ,  ವಕೀಲರ ಸಂಘದ ಅಧ್ಯಕ್ಷರಾದ ಎಸ್ ಲೋಕೇಶ್,  ಕಾರ್ಯದರ್ಶಿ ಸುಧೀರ್,  ಹಿರಿಯ ವಕೀಲರಾದ ಜಿ. ವಿ ರಾಮಮೂರ್ತಿ ಎಂ. ಡಿ ಹರೀಶ್ ಕುಮಾರ್ ಹೆಗ್ಡೆ ಸೇರಿ ಹಲವರು ಭಾಗಿಯಾಗಿದ್ದರು.'ಲಾ ಗೈಡ್' ಕಾನೂನು ಮಾಸಪತ್ರಿಕೆ ಬಳಗದಿಂದ ಉಚಿತ ಕಾನೂನು ಪುಸ್ತಕಗಳ ವಿತರಣೆ law guide

ಇದೇ ವೇಳೆ ಮಾತನಾಡಿದ ಮೈಸೂರು ಜಿಲ್ಲಾ ಸತ್ರ ನ್ಯಾಯಾಧೀಶರಾದ ರವೀಂದ್ರ ಹೆಗ್ಡೆ,  ಲಾಗೈಡ್ ಎಚ್ ಎನ್ ವೆಂಕಟೇಶ್ ಅವರ ಕಾರ್ಯವನ್ನು ಶ್ಲಾಘಿಸಿದರು. ಅವರು ಕೊಟ್ಟ ಮಾತಿನಂತೆ ವಕೀಲರಿಗೆ ಉಚಿತ ಕಾನೂನು ಪುಸ್ತಕ ನೀಡಿದ್ದಾರೆ. ಎಚ್ ಎನ್ ವೆಂಕಟೇಶ್ ಅವರಂತ ವಕೀಲರು ಪ್ರತಿ ಜಿಲ್ಲೆಯ ಸಂಘದಲ್ಲಿದ್ದರೆ ಯಾವ ಸಂಘವು ಬಡವಾಗುವುದಿಲ್ಲ ಎಂದು ತಿಳಿಸಿದರು.

Key words: law books, Free, distribution, Law Guide