ಇದು ಕಾಂಗ್ರೆಸ್ ಶವ ಪೆಟ್ಟಿಗೆಗೆ ಕೊನೆ ಮೊಳೆ ಹೊಡೆಯುವ ಸಂದರ್ಭ- ಶಾಸಕ ಎಸ್.ಎ ರಾಮದಾಸ್ ಹೇಳಿಕೆ

ಮೈಸೂರು,ಸೆ,5,2019(www.justkannada.in): ಡಿಕೆ ಶಿವಕುಮಾರ್  ಹಾಗೂ ಮಾಜಿ ಕೇಂದ್ರ ಸಚಿವ ಚಿದಂಬರಂ ಬಂಧನದಿಂದ ವಿಚಲಿತರಾಗಿದ್ದಾರೆ. ಇದು ಕಾಂಗ್ರೆಸ್ ಶವ ಪೆಟ್ಟಿಗೆಗೆ ಕೊನೆ ಮೊಳೆ ಹೊಡೆಯುವ ಸಂದರ್ಭ ಎಂದು  ಬಿಜೆಪಿ ಶಾಸಕ ಎಸ್.ಎ ರಾಮದಾಸ್ ಹೇಳಿದರು.

ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಎಸ್.ಎ ರಾಮದಾಸ್, ಕಾಂಗ್ರೆಸ್ ಗೆ ಇದು ಡೆಸ್ಪರೇಟ್‌ ಟೈಮ್. ಕಾಂಗ್ರೆಸ್ ಶವ ಪೆಟ್ಟಿಗೆಗೆ ಕೊನೆ ಮೊಳೆ ಹೊಡೆಯುವ ಸಂದರ್ಭವಿದು. ಕಾಂಗ್ರೆಸ್ 72 ವರ್ಷ  ದೇಶವನ್ನ ಆಳಿದೆ. ಆಗ ಕಾಂಗ್ರೆಸ್ ಬಳಿ ಇಡಿ, ಐಟಿ ಇದೆ ಅಂತ ಒಪ್ಪಿಕೊಂಡರೆ ಇದೀಗಾ ಇಡಿ ಐಟಿ ಬಿಜೆಪಿ ಬಳಿ ಇದೆ ಅಂತ ಅರ್ಥ.ಇದು ಕೇವಲ ಕಾನೂನು ಅಷ್ಟೆ ಎಂದರು.

ಸದನದಲ್ಲಿ ಸ್ವತಃ ಡಿಕೆ ಶಿವಕುಮಾರ್ ಅವರೇ ಹೇಳಿದ್ದರು. ನಾನು ತಪ್ಪು ಮಾಡಿದ್ರೆ ಶಿಕ್ಷೆಯಾಗುತ್ತೆ, ಬಂಧನವಾದ್ರೆ ನೀವು ನೋಡೋಕೆ ಬರ್ತಿರಾ ಅಂತ ಅಧ್ಯಕ್ಷರನ್ನ ಕೇಳಿದ್ರು. ಇದೆಲ್ಲವನ್ನು ನೋಡಿದ್ರೆ ಅವರು ಮಾನಸಿಕವಾಗಿ ಸಿದ್ದವಾಗಿದ್ರು ಎಂದು ಗೊತ್ತಾಗುತ್ತೆ ಎಂದು ಎಸ್.ಎ ರಾಮದಾಸ್ ತಿಳಿಸಿದರು.

ಕಾಂಗ್ರೆಸ್ ಪ್ರತಿಭಟನೆ  ಕುರಿತು ಪ್ರತಿಕ್ರಿಯಿಸಿದ ಅವರು ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದರು.

Key words:  last nail – Congress –  statement – MLA- SA Ramadas-mysore