ಕಳೆದ 6 ತಿಂಗಳಲ್ಲಿ ಮೈಸೂರು ಜಿಲ್ಲೆಯಾದ್ಯಂತ 328 ಡೆಂಗ್ಯೂ ಪ್ರಕರಣಗಳು ಪತ್ತೆ.

ಮೈಸೂರು,ಜುಲೈ,14,2022(www.justkannada.in):  ಮೈಸೂರು ಜಿಲ್ಲೆಯಲ್ಲಿ ಸದ್ದಿಲ್ಲದೇ ಡೆಂಗ್ಯೂ ಮಹಾಮಾರಿ ಹರಡುತ್ತಿದ್ದು, ಕಳೆದ ಆರು ತಿಂಗಳಲ್ಲಿ ಮೈಸೂರು ಜಿಲ್ಲೆಯಾದ್ಯಂತ 328 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದೆ ಎಂದು ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪ್ರಸಾದ್ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿ ಮಾಹಿತಿ ನೀಡಿರುವ ಡಾ.ಪ್ರಸಾದ್ , 328 ಡೆಂಗ್ಯೂ ಪ್ರಕರಣಗಳ ಪೈಕಿ ಮೈಸೂರು ನಗರದಲ್ಲೇ 220 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದೆ. ಮೈಸೂರು ತಾಲೂಕಿನಲ್ಲಿ 25, ಪಿರಿಯಾಪಟ್ಟಣ ತಾಲೂಕಿನಲ್ಲಿ 28 ಡೆಂಗ್ಯೂ ಪ್ರಕರಣಗಳು ಬೆಳಕಿಗೆ ಬಂದಿದೆ.  ಇನ್ನುಳಿದ ತಾಲ್ಲೂಕುಗಳಲ್ಲಿ 4 ರಿಂದ 5 ಡೆಂಗ್ಯೂ ಪ್ರಕರಣಗಳು ಪತ್ತೆ ಎಂದು ತಿಳಿಸಿದರು.

ಮಳೆ ಹೆಚ್ಚಿರುವುದರಿಂದ ಸೊಳ್ಳೆಗಳ ಸಂತತಿಯೂ ಹೆಚ್ಚಳವಾಗಿದೆ. ಈ ಬಗ್ಗೆ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಬೇಕು. ಮನೆಯ ಆಸುಪಾಸಿನಲ್ಲಿ ನೀರು ಹೆಚ್ಚು ದಿನ ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ಸೊಳ್ಳೆಗಳು ಮೊಟ್ಟೆ ಇಡುವ ಸ್ಥಳಗಳನ್ನು ಪತ್ತೆ ಮಾಡಿ ಸ್ವಚ್ಚಗೊಳಿಸಬೇಕು.ನೀರಿನ ತೊಟ್ಟಿಗಳನ್ನು ವಾರಕ್ಕೊಮ್ಮೆ ಶುಚಿಗೊಳಿಸಬೇಕು. ಸೊಳ್ಳೆಗಳ ಕಡಿತದಿಂದ ದೂರ ಉಳಿದರೆ ಶೇಕಡ 95 ರಷ್ಟು ರಕ್ಷಣೆ ಸಿಗಲಿದೆ ಎಂದು ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಡಾ ಪ್ರಸಾದ್ ಹೇಳಿದರು.

Key words:  last -6 months-328 dengue -cases – detected – Mysore district.