Wednesday, September 30, 2026

BDA Apartments

ನ್ಯಾಷನಲ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಣೆ BDA JK_A...
Home Front Page ನ್ಯಾಷನಲ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಣೆ

ನ್ಯಾಷನಲ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಣೆ

ನ್ಯಾಷನಲ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಣೆ puli

ಬೆಂಗಳೂರು,ನವೆಂಬರ್,27,2024 (www.justkannada.in):  ಹೆಚ್.ಎನ್.ನ್ಯಾಷನಲ್ ಇಂಜಿನಿಯರಿಂಗ್ ಕಾಲೇಜ್ ನ ವಿದ್ಯಾರ್ಥಿಗಳಿಗೆ ಇಂಡಿಜಿನ್ ಲಿಮಿಟೆಡ್ ಕಂಪನಿಯಿಂದ ಸುಮಾರು 110 ಲ್ಯಾಪ್ ಟಾಪ್ ಗಳನ್ನು ಉಚಿತವಾಗಿ ವಿತರಿಸಲಾಯಿತು.

ಗಣಕ 1.0 ಲ್ಯಾಪ್ ಟಾಪ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಇಂಡಿಜಿನ್ ಕಂಪನಿಯ ಸಹ ಸಂಸ್ಥಾಪಕ ಆನಂದ್ ಕಿರಣ್ ‘ವಿದ್ಯಾರ್ಥಿಗಳ ಕೌಶಲ್ಯ ಅಭಿವೃದ್ಧಿಗಾಗಿ ನಾವು ಹಿಂದಿನಿಂದಲೂ ಇಲ್ಲಿನ ವಿದ್ಯಾರ್ಥಿಗಳಿಗಾಗಿ ಲ್ಯಾಪ್ ಟಾಪ್ ಗಳನ್ನು ನೀಡುತ್ತಿದ್ದೇವೆ. ಮುಂದೆಯೂ ಕೂಡ ಬೆಂಬಲ ನೀಡಲಿದ್ದೇವೆ’ ಎಂದರು.

ಕಾರ್ಯಕ್ರಮದಲ್ಲಿ ಎನ್ ಇಎಸ್ ಆಫ್ ಕರ್ನಾಟಕದ ಅಧ್ಯಕ್ಷರಾದ ಡಾ.ಎಚ್.ಎನ್.ಸುಬ್ರಮಣ್ಯ, ಎನ್ ಇಎಸ್ ಆಫ್ ಕರ್ನಾಟಕ ಗೌರವ ಕಾರ್ಯದರ್ಶಿ, ಡಾ.ಎಚ್. ಎನ್. ಎನ್.ಇಂಜಿನಿಯರಿಂಗ್ ಕಾಲೇಜಿನ ಚೇರ್ಮನ್ ವಿ.ವೆಂಕಟಶಿವಾ ರೆಡ್ಡಿ,  ಚೇರ್ಮನ್ ಡಾ. ಪಿ.ಎಲ್.ವೆಂಕಟರಾಮ ರೆಡ್ಡಿ,  ಕೋಶಾಧಿಕಾರಿ ತಲ್ಲಮ್ ಆರ್.ದ್ವಾರಕನಾಥ್, ಪ್ರಾಂಶುಪಾಲರಾದ ಡಾ. ಡಿ.  ಜಯದೇವಪ್ಪ ಡಾ.ಪಿ.ಎಲ್.ರಮೇಶ್, ಪ್ರೊ.ಮಮತಾ ಭಾಗವಹಿಸಿದ್ದರು.

Key words: Free laptops, distributed, students, National College