ಬೆಳ್ಳಂದೂರು ಬಳಿ ಜಮೀನು ಡಿನೋಟಿಫಿಕೇಷನ್ ಕೇಸ್: ಸಿಎಂ ಬಿಎಸ್ ವೈಗೆ ಮತ್ತೆ ಸಂಕಷ್ಟ.

ಬೆಂಗಳೂರು,ಜುಲೈ,3,2021(www.justkannada.in): ಬೆಳ್ಳಂದೂರು ಬಳಿ ಜಮೀನು ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ  ಸಿಎಂ ಬಿಎಸ್  ಯಡಿಯೂರಪ್ಪಗೆ ಮತ್ತೆ ಸಂಕಷ್ಟ ಎದುರಾಗಿದೆ.jk

ಪ್ರಕರಣ ಸಂಬಂಧ ಲೋಕಾಯುಕ್ತ ಪೊಲೀಸರ ಬಿ ರಿಪೋರ್ಟ್ ತಿರಸ್ಕಾರವಾಗಿದ್ದು, ಪ್ರಕರಣದ ತನಿಖೆ ಮುಂದುವರೆಸಲು ಲೋಕಾಯುಕ್ತ ಡಿವೈಎಸ್ ಪಿಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಸೂಚನೆ ನೀಡಿದೆ. ಹೈಕೋರ್ಟ್ ಆದೇಶ ಪರಿಗಣಿಸಿ ತನಿಖೆ ನಡೆಸಿ ಅಂತಿಮ ವರದಿ ಸಲ್ಲಿಸಿವಂತೆ ನ್ಯಾಯಾಧೀಶರಾದ  ಶ್ರೀಧರ್ ಗೋಪಾಲಕೃಷ್ಣ ಭಟ್ ಆದೇಶ ಹೊರಡಿಸಿದ್ದಾರೆ.

ಬೆಳ್ಳಂದೂರು ಬಳಿ ಜಮೀನು ಡಿನೋಟಿಫಿಕೇಷನ್ ಕೇಸ್  ಸಂಬಂಧ ಸಿಎಂ ಬಿಎಸ್ ವೈ ವಿರುದ್ಧ ವಾಸುದೇವರೆಡ್ಡಿ ಎಂಬುವವರು ಖಾಸಗಿ ದೂರು ದಾಖಲಿಸಿದ್ದರು.

Key words: Land- denotification- case -near –Bellandur-court-CM BS Yeddyurappa