ಇಂದಿನಿಂದ ಲಖನ್ ನನ್ನ ತಮ್ಮನಲ್ಲ, ವಿರೋಧಿ- ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಕಿಡಿ…

ಬೆಳಗಾವಿ,ನ,15,2019(www.justkannada.in): ಇಂದಿನಿಂದ ಡಿಸೆಂಬರ್ 5ರವರೆಗೆ ಲಖನ್ ಜಾರಕಿಹೊಳಿ ನನ್ನ ತಮ್ಮನಲ್ಲ. ನನ್ನ ವಿರೋಧಿ ಎಂದು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಕಿಡಿಕಾರಿದರು.

ಬೆಳಗಾವಿಯಲ್ಲಿ ಇಂದು ಮಾತನಾಡಿದ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ, ಗೋಕಾಕ್​ನಲ್ಲಿ ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗಿದೆ. ಲಖನ್ ಜಾರಕಿಹೊಳಿ ಇಂದಿನಿಂದ ಲಖನ್ ಜಾರಕಿಹೊಳಿ ನನ್ನ ತಮ್ಮನೇ ಅಲ್ಲ. ಡಿಸೆಂಬರ್ 5ರವರೆಗೂ ಆತ ನನ್ನ ವಿರೋಧಿ. ಲಖನ್​ಗೆ ದೇವರು ಒಳ್ಳೆಯ ಬುದ್ಧಿ ಕೊಡಲಿ. ಒಬ್ಬ ಸಹೋದರ ಮೋಸ ಹೋಗಿದ್ದು ನೋಡಿ ಲಖನ್ ಜಾರಕಿಹೊಳಿ ಕೂಡ ಮೋಸ ಹೋಗಿದ್ದಾನೆ  ಎಂದು ಹೇಳಿದರು.

15 ದಿನಗಳ ಹಿಂದೆ ನಾನು ಬಿಜೆಪಿಗೆ ಹೋಗುವ ಬಗ್ಗೆ ಹೇಳಿರಲಿಲ್ಲ. ಇಲ್ಲ ಅಂದಿದ್ದರೇ ನನ್ನ ಸೋಲಿಗೆ ಪ್ಲಾನ್ ರೂಪಿಸುತ್ತಿದ್ದರು. ನನ್ನನ್ನು ಕಾನೂನಿನಲ್ಲಿ ಸಿಕ್ಕಿಸಬೇಕೆಂದು ಯತ್ನಿಸಿದರು. 1 ಮತ ಆಗಲಿ ಅಥವಾ ಲಕ್ಷ ಮತಗಳೇ ಆಗಲಿ ನನ್ನ ಗೆಲುವು ಖಚಿತ ಎಂದು ರಮೇಶ್ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.

ಆರ್. ಶಂಕರ್ ಸಿಎಂ ಯಡಿಯೂರಪ್ಪನವರ ಬಳಿ ಎರಡೆರಡು ಮಾತಾಡಿದ್ದಾರೆ. ಹೀಗಾಗಿ ಅವರಿಗೆ ಟಿಕೆಟ್ ತಪ್ಪಿದೆ. ಆದರೆ, ಖಂಡಿತ ಅವರ ಕೈ ಬಿಡುವುದಿಲ್ಲ. ಆರ್. ಶಂಕರ್ ಅವರನ್ನು ಎಂಎಲ್​ಸಿ ಮಾಡುವ ಜವಾಬ್ದಾರಿ ನನ್ನದು ಎಂದು ರಮೇಶ್ ಜಾರಕಿಹೊಳಿ ಭರವಸೆ ನೀಡಿದರು.

Key words: Lakhan –not-my brother-disqualified MLA-Ramesh jarakiholi