ಮಂಡ್ಯ,ಅಕ್ಟೋಬರ್,12,2023(www.justkannada.in): ರಾಜ್ಯದಲ್ಲಿ ವಿದ್ಯುತ್ ಕೊರತೆ ಎದುರಾಗಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಲೋಡ್ ಶೆಡ್ಡಿಂಗ್ ಶುರುವಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಚಿವ ಡಾ.ಅಶ್ವಥ್ ನಾರಾಯಣ್, ಕಾಂಗ್ರೆಸ್ ಸರ್ಕಾರ ಕತ್ತಲು ಭಾಗ್ಯ ಕೊಟ್ಟಿದೆ ಎಂದು ಟೀಕಿಸಿದ್ದಾರೆ.
ಇಂದು ಮಾತನಾಡಿದ ಅಶ್ವಥ್ ನಾರಾಯಣ್, ಫ್ರೀ ವಿದ್ಯುತ್ ಪೂರೈಕೆ ಎಂದು ಗ್ಯಾರಂಟಿ ಕೊಟ್ಟಿದ್ದರು. ಆದರೆ ರೈತರಿಗೆ ಕತ್ತಲುಭಾಗ್ಯ ಕೊಟ್ಟು ಅಧಿಕಾರದ ಅಮಲಿನಲ್ಲಿದ್ದಾರೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಕಾಂಗ್ರೆಸ್ ಸಂಪೂರ್ಣ ರೈತ ವಿರೋಧಿ ಸರ್ಕಾರ. ಕಾಂಗ್ರೆಸ್ ಯಾವಾಗೆಲ್ಲ ಅಧಿಕಾರಕ್ಕೆ ಬರುತ್ತದೆಯೋ, ರಾಜ್ಯ ಬಜೆಟ್ನಲ್ಲಿ 50 ಪರ್ಸೆಂಟ್ ಕಡಿವಾಣ ಹಾಕಿದೆ. ರೈತ ವಿದ್ಯಾನಿಧಿ, ಭೂಸಿರಿ ಹಿಂದಕ್ಕೆ ಪಡೆದಿದೆ. ರೈತರಿಗೆ ವಿದ್ಯುತ್ ಶಕ್ತಿ ಕೊಡುತ್ತಿಲ್ಲ. ಸಂಪೂರ್ಣವಾಗಿ ಕತ್ತಲಭಾಗ್ಯ ಕೊಟ್ಟು, ದಾರಿದ್ರ್ಯವನ್ನ ತಂದುಕೊಟ್ಟಿದೆ ಎಂದು ವಾಗ್ದಾಳಿ ನಡೆಸಿದರು.
Key words: Lack of electricity- Congress- government- Former minister -Dr. Aswath Narayan






