ರೈತರ ಪಾಲಿಗೆ ಬಜೆಟ್ ನಿರಾಸೆ ತಂದಿದೆ – ಕುರುಬೂರು ಶಾಂತಕುಮಾರ್

ಮೈಸೂರು,ಮಾರ್ಚ್,6,2026 (www.justkannada.in): ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕ ರಾಜ್ಯ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದೆ.  ಇದನ್ನು ತಡೆಗಟ್ಟಲಿಕ್ಕೆ ಯಾವುದೇ ಯೋಜನೆಗಳಿಲ್ಲ. ರೈತರ ಮಕ್ಕಳು ಕೃಷಿ ಕ್ಷೇತ್ರದ ಬಗ್ಗೆ ಬೇಸರಗೊಂಡು ವಲಸೆ ಹೋಗುತ್ತಿದ್ದಾರೆ.  ಮದುವೆಯಾಗಲು ಹೆಣ್ಣುಗಳು ಸಿಗುತ್ತಿಲ್ಲ.  ಇದು ಭೀಕರವಾದ ಸಮಸ್ಯೆ, ಇದನ್ನ ತಡೆಗಟ್ಟಲು ಯಾವುದೇ ಯೋಜನೆಗಳಿಲ್ಲ. ಕೃಷಿ ಕ್ಷೇತ್ರ ಮತ್ತಷ್ಟು ದುರ್ಬಲವಾಗಲು ಕಾರಣವಾಗುತ್ತದೆ. ರೈತರ ಪಾಲಿಗೆ ಬಜೆಟ್ ನಿರಾಸೆ ತಂದಿದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.

ರಾಜ್ಯ ಬಜೆಟ್ ಬಗ್ಗೆ  ಪ್ರತಿಕ್ರಿಯಿಸಿದ ಕುರುಬೂರು ಶಾಂತಕುಮಾರ್, ತೋಟಗಾರಿಕೆ ಉತ್ಪನ್ನಗಳ ದಾಸ್ತಾನಿಗಾಗಿ ದಾವಣಗೆರೆ ಹಾಗೂ ಬಿಜಾಪುರ ಜಿಲ್ಲೆಗಳಲ್ಲಿ ಘಟಕ ಆರಂಭ. ರೇಷ್ಮೆ ಉದ್ಯಮಕ್ಕೆ  ಒತ್ತು ನೀಡಿರುವುದು,  ರೇಷ್ಮೆಗೂಡು ಸಾಗಾಣಿಕೆ ವೆಚ್ಚ 20 ರೂ. ಏರಿಕೆ ಮಾಡಿರುವುದು. ಪ್ರೋತ್ಸಾಹದಾಯಕ  ಶೂನ್ಯ  ಬಡ್ಡಿ ದರದಲ್ಲಿ 38 ಲಕ್ಷ ರೈತರಿಗೆ 30ಸಾವಿರ ಕೋಟಿ ರೂಪಾಯಿ  ರೈತರಿಗೆ ಸಾಲ ನೀಡುವ ಯೋಜನೆ, ಇದು ಹಳೆಯ ಯೋಜನೆ. ಇದರಲ್ಲಿ ವಿಶೇಷವೇನು ಇಲ್ಲ ಹಸು, ಎಮ್ಮೆ ಖರೀದಿಸಲು ಶೇಕಡಾ 25 ರಷ್ಟು ಪ್ರೋತ್ಸಾಹ ಧನ  ಹೈನುಗಾರಿಕೆ ಸ್ವಲ್ಪ ಒತ್ತು ನೀಡಿದ್ದಾರೆ ಎಂದರು.

16 ವರ್ಷದ ಮಕ್ಕಳಿಗೆ ಮೂಬೈಲ್ ನಲ್ಲಿ ಸಾಮಾಜಿಕ ಜಾಲತಾಣ ಬಳಕೆ   ನೀಷೇಧ, ಕೃಷಿ ಕ್ಷೇತ್ರದಲ್ಲಿ AI ತಂತ್ರಜ್ಞಾನ ಬಳಕೆ ಅಭಿವೃದ್ಧಿಗೆ ಪೂರಕ, ಒಳ್ಳೆಯ ಚಿಂತನೆಯಾಗಿದೆ. ಮೈಸೂರಿನಲ್ಲಿ ಜಯದೇವ ಆಸ್ಪತ್ರೆ ಉನ್ನತಿಕರಣಕ್ಕೆ 180 ಕೋಟಿ ಹಣ ಮೀಸಲಿಟ್ಟಿರುವುದು ಉತ್ತಮ ನಿರ್ಧಾರ ಎಂದು ಕುರುಬೂರು ಶಾಂತಕುಮಾರ್ ಹೇಳಿದರು.

Key words: Budget, disappointment,  farmers, Kuruburu Shanthakumar