ಪಿಸ್ತೂಲಿನಲ್ಲಿ ಗುಂಡಿಕ್ಕಿಕೊಂಡು ಆತ್ಮಹತ್ಯೆಗೆ ಶರಣಾದ ಕುಂದಾಪುರದ ಉದ್ಯಮಿ

ಬೆಂಗಳೂರು, ಮೇ 27, 2022 (www.justkannada.in):  ಉದ್ಯಮಿ, ಕುಂದಾಪುರ ಚಿನ್ಮಯಿ ಆಸ್ಪತ್ರೆ ಮಾಲಕ ಕಟ್ಟೆ ಗೋಪಾಲಕೃಷ್ಣ ರಾವ್‌ (ಕಟ್ಟೆ ಭೋಜಣ್ಣ) (79) ಪಿಸ್ತೂಲಿನಲ್ಲಿ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹಂಗಳೂರು ಗ್ರಾಮದ ಅಂಕದಕಟ್ಟೆಯಲ್ಲಿರುವ ಉದ್ಯಮಿ ಮೊಳಹಳ್ಳಿ ಗಣೇಶ್‌ ಶೆಟ್ಟಿ ಅವರ ಮನೆಯ ಸಿಟೌಟ್‌ನಲ್ಲಿ ಪಿಸ್ತೂಲಿನಲ್ಲಿ ಗುಂಡಿಕ್ಕಿಕೊಂಡು ಗುರುವಾರ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕುಂದಾಪುರದಲ್ಲಿ ಆರಂಭವಾದ ಗೋಲ್ಡ್‌ ಜುವೆಲ್ಲರಿಯಲ್ಲಿ ಗಣೇಶ್‌ ಶೆಟ್ಟಿ ತಟಸ್ಥ ಪಾಲುದಾರರಾಗಿದ್ದು, ಈ ಗೋಲ್ಡ್‌ ಜುವೆಲ್ಲರಿಯ ಪಾಲುದಾರರು ಆಫ್ರಿಕಾದ ಚಿನ್ನದ ಗಣಿಯಲ್ಲಿ ಹಣ ವಿನಿಯೋಗಿಸಿದ್ದರು ಎನ್ನಲಾಗಿದೆ.

ಆರಂಭದಲ್ಲಿ ಇದು ಉತ್ತಮ ಲಾಭ ತಂದಿದ್ದು, ಚಿನ್ನದ ಆಸೆಗೆ ಬಿದ್ದ ಇದರ ಪಾಲುದಾರರು ಇಲ್ಲಿನ ಅಷ್ಟು ಹಣವನ್ನು ಅಲ್ಲಿಗೆ ಸುರಿದಿದ್ದರು. ಇದೇ ಆತ್ಮಹತ್ಯೆಗೆ ಕಾರಣ ಎನ್ನಲಾಗುತ್ತಿದೆ.