ಬೈಕ್ ಗೆ ಕೆಎಸ್.ಆರ್.ಟಿ.ಸಿ ಬಸ್  ಡಿಕ್ಕಿ: ಇಬ್ಬರು ಯುವಕರು ಸ್ಥಳದಲ್ಲೇ ದುರ್ಮರಣ

ಮಂಡ್ಯ,ಆಗಸ್ಟ್,29,2025 (www.justkannada.in):  ಬೈಕ್ ಗೆ ಕೆಎಸ್ ಆರ್ ಟಿಸಿ ಬಸ್  ಡಿಕ್ಕಿಯಾಗಿ  ಬೈಕ್ ಸವಾರರಿಬ್ಬರೂ ಸ್ಥಳದಲ್ಲೇ  ಮೃತಪಟ್ಟಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕಿನ ಅಂಚೆಬೀರನಹಳ್ಳಿ ಬಳಿ ಈ  ಘಟನೆ ನಡೆದಿದೆ. ಕಡೆಹೆಮ್ಮಿಗೆ ಗ್ರಾಮದ ಉಮೇಶ್ (24) ಹಾಗೂ ಚನ್ನರಾಯಪಟ್ಟಣದ ದಿನೇಶ್ ಮೃತ ಪಟ್ಟ ಯುವಕರು.

ಮೃತ ಇಬ್ಬರೂ ಬೈಕ್ ನಲ್ಲಿ ಚನ್ನರಾಯಪಟ್ಟಣಕ್ಕೆ ತೆರಳುತ್ತಿದ್ದರು. ಈ ವೇಳೆ ಮೈಸೂರು ಕಡೆಯಿಂದ ಬಂದ ಕೆಎಸ್ ಆರ್ ಟಿಸಿ ಬಸ್  ಬೈಕ್ ಗೆ ಡಿಕ್ಕಿ ಹೊಡೆದಿದ್ದು, ಡಿಕ್ಕಿ ರಭಸಕ್ಕೆ ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದಾರೆ.  ಚಾಲಕನ ಅಜಾಗರೂಕ ಚಾಲನೆಯೇ ಘಟನೆಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ

ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಾಗಿದೆ.

Key words: KSRTC bus, collides, bike, Two youths, die