ಜೂನ್ ನಲ್ಲಿ ಕೆಎಸ್ ಆರ್ ಟಿಸಿ, ಬಿಎಂಟಿಸಿ ಬಸ್ ಟಿಕೆಟ್ ದರ ಹೆಚ್ಚಳ..

ಬೆಂಗಳೂರು, ಮೇ 25,2019(www.justkannada.in):   ಜೂನ್ ತಿಂಗಳಿನಿಂದ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್  ಟಿಕೆಟ್ ದರ ಹೆಚ್ಚಳ ಮಾಡಲಾಗುತ್ತದೆ ಎಂದು ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಬಿ. ಬಸವರಾಜ್ ತಿಳಿಸಿದ್ದಾರೆ.

ಬಸ್ ದರ ಏರಿಕೆ ಬಗ್ಗೆ ಇಂದು ಪ್ರತಿಕ್ರಿಯಿಸಿದ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಬಿ. ಬಸವರಾಜ್, ಜೂನ್ ನಲ್ಲಿ ಶೇ 20ರಷ್ಟು ಬಸ್ ಟಿಕೆಟ್ ದರವನ್ನು ಹೆಚ್ಚಿಸಲು ಸರ್ಕಾರ ಚಿಂತನೆ ನಡೆಸಿದೆ. ಕಾರ್ಮಿಕರ ಹಿತದೃಷ್ಟಿಯಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ. ಸಂಸ್ಥೆಗಳ ಸಬಲೀಕರಣಕ್ಕೆ ಬಸ್ ಟಿಕೆಟ್ ದರ ಏರಿಕೆ ಅನಿವಾರ್ಯವಿದೆ ಎಂದು ಹೇಳಿದ್ದಾರೆ.

ಕಳೆದ ಏಳು ವರ್ಷಗಳಿಂದ ಬಸ್ ಪ್ರಯಾಣ ದರದಲ್ಲಿ ಏರಿಕೆ ಮಾಡಿಲ್ಲ.  ಈಗಾಗಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಭಾರಿ ಹೆಚ್ಚಳವಾಗಿವೆ. ಸಾರಿಗೆ ಸಂಸ್ಥೆಗಳ ವೆಚ್ಚ, ಕಾರ್ಮಿಕರ ಸಂಬಳ, ನಿರ್ವಹಣೆ ಮುಂತಾದವುಗಳನ್ನು ನಿಭಾಯಿಸಲು ದರ ಹೆಚ್ಚಳ ಮಾಡುವುದು ಅಗತ್ಯವಿದೆ. ಬಸ್ ದರ ಏರಿಕೆಯಿಂದ ಹೆಚ್ಚಿನ ಸೌಕರ್ಯ ನೀಡಬಹುದು  ಎಂದು ಬಿ. ಬಸವರಾಜ್ ತಿಳಿಸಿದ್ದಾರೆ.

Key words: KSRTC, BMTC bus fares up in June.

#KSRTC #BMTC #bus# fares