KSOU ಕುಲಸಚಿವರ ವಿಚಾರಣೆಗೆ ತಡೆಯಾಜ್ಞೆ ನೀಡಿದ ಹೈಕೋರ್ಟ್ ವಿಭಾಗೀಯ ಪೀಠ.

ಬೆಂಗಳೂರು, ಅ.13, 2020 : (www.justkannada.in news) : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ.ಲಿಂಗರಾಜ ಗಾಂಧಿ ವಿರುದ್ಧದ ವಿಚಾರಣೆಗೆ ಹೈಕೋರ್ಟ್ ನ ವಿಭಾಗೀಯ ತಡೆ ನೀಡಿದೆ.

ಕೆಎಸ್‌ಒಯು ವಿನ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥ ಡಾ.ಎ.ರಂಗಸ್ವಾಮಿ ಅವರ ಅರ್ಜಿ ವಿಚಾರಣೆ ವೇಳೆ, ಕುಲಸಚಿವ ಪ್ರೊ.ಲಿಂಗರಾಜ ಗಾಂಧಿ ವಿರುದ್ಧ ತನಿಖೆ ನಡೆಸಲು ಸೆ. 7 ರಂದು ಏಕ ಸದಸ್ಯ ಪೀಠ ಆದೇಶಿಸಿತ್ತು. ಡಾ.ಎ.ರಂಗಸ್ವಾಮಿ ಕುಲಪತಿ ಹುದ್ದೆ ಆಕಾಂಕ್ಷಿಯಾದ ಕಾರಣ, ದುರುದ್ದೇಶದಿಂದ ಅವರ ವಿರುದ್ಧ ವಿಚಾರಣೆ ಬಾಕಿ ಇದೆ ಎಂಬ ಮಾಹಿತಿ ನೀಡಿದ್ದಾರೆ. ಆದ್ದರಿಂದ ಈ ಸಂಬಂಧ ಕುಲಸಚಿವರನ್ನು ವಿಚಾರಣೆ ನಡೆಸುವಂತೆ ಹೈಕೋರ್ಟ್ ಆದೇಶಿಸಿತ್ತು.

KSOU-registrar-prof.lingaraja.gandgi-division-bench-stayed

ಡಾ.ರಂಗಸ್ವಾಮಿ ಅವರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ, ಡಾ.ಎ.ರಂಗಸ್ವಾಮಿ ವಿರುದ್ಧ ವಿಚಾರಣೆ ನಡೆಯುತ್ತಿರುವ ಬಗ್ಗೆ ಯಾವುದೇ ದಾಖಲೆಗಳನ್ನು ಕೆಎಸ್‌ಒಯು ಪ್ರಸ್ತುತಪಡಿಸಿಲ್ಲ. ಡಾ. ಲಿಂಗರಾಜ ಗಾಂಧಿ ಅವರೇ ಸ್ವತಃ ಸ್ಪರ್ಧಿಯಾಗಿದ್ದರಿಂದ ಶೋಧನಾ ಸಮಿತಿಯ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದ್ದಾರೆ’ ಎಂದು ಅಭಿಪ್ರಾಯಪಟ್ಟಿತ್ತು. ಜತೆಗೆ ಈ ಸಂಬಂಧ ಕುಲಸಚಿವರನ್ನು ವಿಚಾರಣೆ ನಡೆಸಲು ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಕುಲಸಚಿವ ಪ್ರೊ.ಲಿಂಗರಾಜಗಾಂಧಿ ಕೋರ್ಟ್ ಮೆಟ್ಟಿಲು ಹತ್ತಿದ್ದರು.

ಇಂದು (ಅ.13) ಈ ಅರ್ಜಿಯ ವಿಚಾರಣೆ ನಡೆಸಿದ ವಿಭಾಗೀಯ ಪೀಠ, ಸೆ.07 ರ ಏಕ ಸದಸ್ಯ ಪೀಠ ನೀಡಿದ್ದ ಆದೇಶಕ್ಕೆ ತಡೆ ನೀಡಿದೆ ಎಂದು ಕುಲಸಚಿವ ಪ್ರೊ.ಲಿಂಗರಾಜ ಗಾಂಧಿ ತಿಳಿಸಿದ್ದಾರೆ.

KSOU-registrar-prof.lingaraja.gandgi-division-bench-stayed

OOOO

key word : KSOU-registrar-prof.lingaraja.gandgi-division-bench-stayed

 

The Division Bench of the Hon’ble High Court of Karnataka, Bengaluru stayed the order of the learned Single judge .