KSOU : ತಾತ್ಕಾಲಿಕ ನೌಕರರ ಖಾಯಂ ಪ್ರಸ್ತಾವನೆ ತಿರಸ್ಕರಿಸಿದ ರಾಜ್ಯ ಸರಕಾರ. 

KSOU-proposal-rejects-state-government

ಮೈಸೂರು, ಜು.13, 2022 : (www.justkannada.in news) ಸೇವೆಗೆ ತಾತ್ಕಾಲಿಕ ನೇಮಕಗೊಂಡ ಸಿಬ್ಬಂದಿಗಳನ್ನು ಖಾಯಂಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿವಿ ಸಲ್ಲಿಸಿದ್ದ ಪ್ರಸ್ತಾವನೆಯನ್ನು ರಾಜ್ಯ ಸರಕಾರ ತಿರಸ್ಕರಿಸಿದೆ.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (Karnataka state open university – KSOU ) ಸೇವೆಗೆ ತಾತ್ಕಾಲಿಕ ನೇಮಕಗೊಂಡು ಪ್ರಸ್ತುತ ಕಾಲಿಕ ವೇತನ ಶ್ರೇಣಿಯಲ್ಲಿ (ಗ್ರೇಡಡ್ ಪೇ ) ಕಾರ್ಯನಿರ್ವಹಿಸುತ್ತಿರುವ ನೌಕರರನ್ನು ವಿಶ್ವವಿದ್ಯಾಲಯದಲ್ಲಿ ಮಂಜೂರಾಗಿರುವ ಖಾಲಿ ಹುದ್ದೆಗಳಿಗೆ ಎದುರಾಗಿ Absorption ಮಾಡುವ Karnataka State Open University (Absorption to Group B, C and D Posts) Special Status-2022″ ಎಂಬ ಕರಡು ಪರಿನಿಯಮವನ್ನು ಅನುಮೋದಿಸುವಂತೆ ಕೋರಿ ಉನ್ನತ ಶಿಕ್ಷಣ ಇಲಾಖೆಗೆ ಪ್ರಸ್ತಾವನೆ ( ಕರಾಮುವಿ/ಆವಿ/ಸಿಬ್ಬಂದಿ-2/1001/2021-22 ) ಸಲ್ಲಿಸಲಾಗಿತ್ತು.

ಇದಕ್ಕೆ ಪ್ರತಿಯಾಗಿ ಉನ್ನತ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ, ಮೇ 11, 2022 ರಂದು ಪತ್ರ ಬರೆದು ಕೆಎಸ್ಒಯು ಪ್ರಸ್ತಾವನೆ ಜಾರಿಗೆ ಅನುಮತಿ ನಿರಾಕರಿಸಿದ್ದಾರೆ. ಒಟ್ಟಾರೆ ಪತ್ರದ ಸಾರಾಂಶ ಹೀಗಿದೆ…

ಸದರಿ ಪ್ರಸ್ತಾವನೆಯನ್ನು ಪರಿಶೀಲಿಸಿ, ಸರ್ವೋಚ್ಚ ನ್ಯಾಯಾಲಯದ ಸಂವಿಧಾನ – ಪೀಠವು ಉಮಾದೇವಿ ಪ್ರಕರಣದಲ್ಲಿ (ಸಿವಿಲ್‌ ಅಫೀಲು ಸಂಖ್ಯೆ 3595-3612/1999) ದಿನಾಂಕ: 10.04.2005 ರಂದು ದಿನಗೂಲಿ ನೌಕರರ ಸಕ್ರಮಾತಿ ಬಗ್ಗೆ ತೀರ್ಪು ನೀಡುವಾಗ ಸಿವಿಲ್ ಸೇವೆಗೆ ನೇಮಕಾತಿ ಮಾಡುವ ಬಗ್ಗೆ, ತಾತ್ಕಾಲಿಕ ನೌಕರರನ್ನು/ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡ ನೌಕರರನ್ನು ಖಾಯಂ ಮಾಡುವ ಬಗ್ಗೆ ಇತ್ಯಾದಿ ಅನೇಕ ವಿಷಯಗಳನ್ನು ಪ್ರಸ್ತಾವನೆ ಜಾರಿ ಕಾರ್ಯಸಾಧುವಲ್ಲ ಎಂದು ಅಭಿಪ್ರಾಯಪಟ್ಟಿದೆ.

ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ, ಯಾವುದೇ ನೇಮಕಾತಿಯನ್ನು ನೇಮಕಾತಿ ನಿಯಮಗಳಲ್ಲಿ ನಿಗದಿಪಡಿಸಿರುವ ವಿಧಿವಿಧಾನಗಳನ್ನು ಅನುಸರಿಸಿ ಸಾರ್ವಜನಿಕವಾಗಿ ಅರ್ಜಿ ಆಹ್ವಾನಿಸಿ, ಅರ್ಹ ಅಭ್ಯರ್ಥಿಯನ್ನು ನೇಮಕ ಮಾಡಿಕೊಳ್ಳಬೇಕಾಗುತ್ತದೆ. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಕಾರ್ಯನೀತಿಯಂತೆ ನೇರ ನೇಮಕಾತಿಯಲ್ಲಿ Vertical (ಲಂಬತಲ) ಹಾಗೂ Horizontal (ಸಮತಲ) ಮೀಸಲಾತಿ ಯನ್ನು ರೋಸ್ಟರ್ ಬಿಂದುಗಳನ್ವಯ ಮಾತ್ರ ನೇಮಕ ಮಾಡಿಕೊಳ್ಳಬೇಕಾಗುತ್ತದೆಂದು ತಿಳಿಸಿ, ಉಲ್ಲೇಖಿತ ಪ್ರಸ್ತಾವನೆಯನ್ನು ಈ ನಿಯಮದಡಿ ಅನುಮೋದಿಸಲು ಅವಕಾಶವಿರುವುದಿಲ್ಲವೆಂದು ಉನ್ನತ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ ಶೀತಲ್ ಎಂ ಹಿರೇಮಠ ಪತ್ರದಲ್ಲಿ ತಿಳಿಸಿದ್ದಾರೆ.

key words : KSOU-proposal-rejects-state-government