KSOU ಘಟಿಕೋತ್ಸವ: ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಿ..

ಮೈಸೂರು,ಡಿಸೆಂಬರ್,20,2025 (www.justkannada.in): ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ 21ನೇ ವಾರ್ಷಿಕ ಘಟಿಕೋತ್ಸವವನ್ನು ಜನವರಿ ಕೊನೆಯ ವಾರದಲ್ಲಿ ನಡೆಸಲು ತೀರ್ಮಾನಿಸಲಾಗಿದ್ದು ವಿದ್ಯಾರ್ಥಿಗಳಿಂದ ಪ್ರಮಾಣಪತ್ರಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

2013-14, 2014-15 ಶೈಕ್ಷಣಿಕ ಸಾಲಿನಲ್ಲಿ ಪ್ರವೇಶಾತಿ ಪಡೆದು, ಪದವಿ ಪೂರ್ಣಗೊಳಿಸಿರುವ ಇನ್‌ಹೌಸ್ ಕಾರ್ಯಕ್ರಮಗಳ ವಿದ್ಯಾರ್ಥಿಗಳು ಪದವಿ ಪ್ರಮಾಣಪತ್ರ ಪಡೆಯಲು ಅರ್ಹರಾಗಿದ್ದಾರೆ.  2013-14ನೇ ಶೈಕ್ಷಣಿಕ ಸಾಲಿನಲ್ಲಿ ಪ್ರವೇಶಾತಿ ಪಡೆದು ಉತ್ತೀರ್ಣಗೊಂಡಿರುವ (ಏಪ್ರಿಲ್/ಮೇ – 2024ರವರೆಗೆ) ಬಿ.ಎ, ಬಿಕಾಂ, ಬಿ.ಲಿಬ್.ಐ.ಎಸ್ಸಿ, ಬಿ.ಇಡಿ ಮತ್ತು ಬಿ.ಇಡಿ ವಿಶೇಷ ಮತ್ತು ಸರ್ಪಿಫಿಕೆಟ್ ಕಾರ್ಯಕ್ರಮಗಳ ಸ್ನಾತಕ ಪದವಿಯ ವಿದ್ಯಾರ್ಥಿಗಳು, 2013-14ನೇ ಶೈಕ್ಷಣಿಕ ಸಾಲಿನಲ್ಲಿ ಪ್ರವೇಶಾತಿ ಪಡೆದು ತೇರ್ಗಡೆ ಆಗಿರುವ (ಏಪ್ರಿಲ್/ಮೇ 2024ರವರೆಗೆ) ಎಲ್ಲಾ ಎಂ.ಎ, ಎಂ.ಕಾಂ, ಎಂ.ಬಿ.ಎ, ಎಂ.ಇಡಿ, ಎಲ್ಲಾ ಎಂ.ಎಸ್ಸಿ ಮತ್ತು ಪಿ.ಜಿ ಡಿಪ್ಲೊಮಾ ಕಾರ್ಯಕ್ರಮಗಳ ವಿದ್ಯಾರ್ಥಿಗಳು ಸ್ನಾತಕೋತ್ತರ ಪ್ರಮಾಣಪತ್ರ ಪಡೆಯಬಹುದು.

2014-15ನೇ ಶೈಕ್ಷಣಿಕ ಸಾಲಿನಲ್ಲಿ ಪ್ರವೇಶಾತಿ ಪಡೆದು ಉತ್ತೀರ್ಣಗೊಂಡಿರುವ (ಏಪ್ರಿಲ್/ಮೇ 2024ರವರೆಗೆ) ಬಿ.ಎ, ಬಿ.ಕಾಂ, ಬಿ.ಲಿಬ್.ಐಎಸ್ಸಿ, ಬಿ.ಇಡಿ ಮತ್ತು ಬಿ.ಇಡಿ ವಿಶೇಷ ಮತ್ತು ಸರ್ಟಿಫಿಕೇಟ್ ಕಾರ್ಯಕ್ರಮಗಳ ಸ್ನಾತಕ -ಪದವಿಯ ವಿದ್ಯಾರ್ಥಿಗಳು, 2014-15ನೇ ಶೈಕ್ಷಣಿಕ ಸಾಲಿನಲ್ಲಿ ಪ್ರವೇಶಾತಿ ಪಡೆದು ಉತ್ತೀರ್ಣರಾಗಿರುವ ಎಲ್ಲಾ  ಎಂ.ಎ, ಎಂ.ಕಾಂ, ಎಂ.ಬಿ.ಎ, ಎಂಇಡಿ  ಎಲ್ಲಾ ಎಂಎಸ್ಸಿ,  ಎಂ.ಲಿಬ್.ಐಎಸ್ಸಿ ಮತ್ತು ಪಿ.ಜಿ ಡಿಪ್ಲೊಮಾ ಕಾರ್ಯಕ್ರಮಗಳ ಸ್ನಾತಕೋತ್ತರ ವಿದ್ಯಾರ್ಥಿಗಳು ಅರ್ಹರಿರುತ್ತಾರೆ. ನಿಗದಿತ ಅರ್ಜಿಯನ್ನು ವಿಶ್ವವಿದ್ಯಾಲಯದ ಅಧಿಕೃತ ಜಾಲತಾಣ (www.ksoumysuru.ac.in) ದಲ್ಲಿ ಪಡೆದು, ಆನ್‌ ಲೈನ್‌ ನಲ್ಲೇ ಶುಲ್ಕ ಪಾವತಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

Key words: KSOU, Convocation, Apply, Certificate.