ನಾಳೆ KSOU 21ನೇ ವಾರ್ಷಿಕ ಘಟಿಕೋತ್ಸವ: 8 ಗಣ್ಯರಿಗೆ ಗೌರವ ಡಾಕ್ಟರೇಟ್

ಮೈಸೂರು,ಜನವರಿ,30,2026 (www.justkannada.in): ನಾಳೆ( ಜನವರಿ 30) ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ 21ನೇ ವಾರ್ಷಿಕ ಘಟಿಕೋತ್ಸವ ನಡೆಯಲಿದ್ದು8 ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರಧಾನ ಮಾಡಲಾಗುತ್ತದೆ.

ನಾಳೆ ಬೆಳಗ್ಗೆ 11.30ಕ್ಕೆ  ಕರಾಮುವಿ ಘಟಿಕೋತ್ಸವ  ಭವನದಲ್ಲಿ  ಕರಾಮುವಿಯ 21ನೇ ವಾರ್ಷಿಕ ಘಟಿಕೋತ್ಸವ ಆಯೋಜಿಸಲಾಗಿದೆ. ಬೆಂಗಳೂರಿನ ಹರ್ಷ ಸಂಸ್ಥೆಯ ಎಸ್. ಶಿವಕುಮಾರ್ , ತುಮಕೂರಿನ  ಕೆಗ್ಗೆರೆಯ  ಕಿಡ್ನ ಇಂಟರ್‌ನ್ಯಾಶನಲ್ ಸ್ಕೂಲ್, ಸಂಸ್ಥಾಪಕ ಮತ್ತು ಕಾರ್ಯದರ್ಶಿ ಸತೀಶ್ ಕುಮಾರ್ ಡಿ., ಮೈಸೂರಿನ ಪ್ರಜಾಪೀಟ ಬ್ರಹ್ಮಕುಮಾರಿ ಐರ್ಶ್ವಯ ವಿಶ್ವವಿದ್ಯಾಲಯದ ಬ್ರಹಕುಮಾರಿ, ಲಕ್ಷ್ಮೀ ಜಿ, ಹೆಬ್ಬಾಳು ಸಂಸ್ಥಾಪಕ  ಕೆ.ಬಿ. ಲಿಂಗರಾಜು, ಮೈಸೂರಿನ ಶ್ರೀ ಯೋಗಾ ನರಸಿಂಹ ಸ್ವಾಮಿ ದೇವಸ್ಥಾನದ ಪ್ರೊ. ಭಾಷ್ಯಂ ಸ್ವಾಮಿ, ಬೀದರ್ ನ  ಶಿವಶಂಕರ ಟೊಕರೆ, ಹಾಸನದ ಬಿ.ಎಸ್. ನಾಗಭೂಷಣ ಆಟ್ರಿ,  ಬೆಂಗಳೂರಿನ ಡಾ. ಸಿ. ಸೋಮಶೇಖರ ಅವರಿಗೆ ಕೆಎಸ್ ಒಯು ಗೌರವ ಡಾಕ್ಟರೇಟ್ ಗೆ ಆಯ್ಕೆ ಮಾಡಲಾಗಿದ್ದು ನಾಳೆ ಪ್ರದಾನ ಮಾಡಲಾಗುತ್ತದೆ.

ಇನ್ನು 68 ಮಂದಿ ಪಿಹೆಚ್.ಡಿ , 65 ಮಂದಿ  ಚಿನ್ನದ ಪದಕಗಳ ಗಳಿಸಿದ್ದು ಮತ್ತು ನಗದು 62 ಬಹುಮಾನಗಳನ್ನು ಪಡೆದಿದ್ದು, ಇವರನ್ನೊಳಗೊಂಡಂತೆ ಒಟ್ಟು 10691 ಅಭ್ಯರ್ಥಿಗಳು ವಿವಿಧ ಪದವಿಗಳನ್ನು ಪಡೆಯಲು ಅರ್ಹರಾಗಿದ್ದಾರೆ. ಇವರಲ್ಲಿ 3987 ಪುರುಷರು ಮತ್ತು 6704 ಮಹಿಳೆ ವಿದ್ಯಾರ್ಥಿಗಳಾಗಿದ್ದಾರೆ.

Key words: Mysore, KSOU, 21st Annual Convocation, Honorary doctorates