ಕೆ.ಆರ್.ಎಸ್ ರಸ್ತೆಯಲ್ಲಿ ‘’ಫ್ಲೈ ಓವರ್ ‘’ ನಿರ್ಮಾಣ : ಸಂಸದ ಪ್ರತಾಪ್ ಸಿಂಹ ಸ್ಥಳ ಪರಿಶೀಲನೆ…!

ಮೈಸೂರು,ಜನವರಿ,02,2020(www.justkannada.in) : ಕೆ.ಆರ್.ಎಸ್ ರಸ್ತೆಯಲ್ಲಿರುವ ಬ್ರಿಗೇಡ್ ಅಪಾರ್ಟ್ ಮೆಂಟ್ ನಿಂದ ರಾಯಲ್ ಇನ್ ಹೋಟೆಲ್ ವರೆಗೆ ‘’ಫ್ಲೈ ಓವರ್ ‘’ ನಿರ್ಮಾಣ ಸಂಬಂಧಿಸಿದಂತೆ ಇಂದು ಸಂಸದ ಪ್ರತಾಪ್ ಸಿಂಹ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು.jk-logo-justkannada-mysoreಬಳಿಕ ಮಾತನಾಡಿದ ಅವರು, ಸಾರ್ವಜನಿಕರು ಹಾಗೂ ಪ್ರವಾಸಿಗರ ರಸ್ತೆ ಸಂಚಾರಕ್ಕೆ ಅನುಕೂಲವಾಗುವಂತೆ ಫ್ಲೈ ಓವರ್ ನಿರ್ಮಾಣ ಮಾಡಲಾಗುತ್ತಿದೆ. ಇಲ್ಲಿ ರೈಲ್ವೆ ಲೆವೆಲ್ ಕಾರ್ಸಿಂಗ್ ಇದೆ. ಪ್ರವಾಸಿಗರು ಚಾಮುಂಡಿಬೆಟ್ಟ, ಅರಮನೆ, ಮೃಗಾಲಯ ನೋಡಿಕೊಂಡು ಕೆಆರ್ ಎಸ್ ಗೆ ಹೋಗಬೇಕೆಂದು ಬರುತ್ತಾರೆ. ಶ್ರೀರಂಗಪಟ್ಟಣ ಕಡೆ ಹೋಗುವವರು ಈ ರಸ್ತೆಯನ್ನು ಬಳಸುತ್ತಾರೆ. ಅಲ್ಲಿ ರೈಲ್ವೆ ಟ್ರ್ಯಾಕ್ ಇರುವುದರಿಂದ ಬಹಳ ಅಡಚಣೆಯಾಗುತ್ತಿದೆ ಎಂದರು.ಆರಂಭದಲ್ಲಿ ಗ್ರೈಡ್ ಸಪ್ರೇಟರ್ ರೀತಿ ಮಾಡಬೇಕೆಂದುಕೊಂಡಿದ್ದೆವು. ಆದರೆ, ಅದು ಆಗಲಿಲ್ಲ. ಈಗ ಫ್ಲೈ ಓವರ್ ರೀತಿ ಮಾಡಿ ಕೆಆರ್ ಎಸ್ ರಸ್ತೆಗೆ ಸರಾಗವಾಗಿ ಚಲಿಸುವುದಕ್ಕೆ ಅನುವು ಮಾಡಿಕೊಡುವ ಉದ್ದೇಶವಾಗಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರದಿಂದ  2016-17ರ ಬಜೆಟ್ ನಲ್ಲಿ ಕೆಆರ್ ಎಸ್ ರಸ್ತೆಯ ರೈಲ್ವೆ ಹಳಿಯಲ್ಲಿ ಓವರ್ ಬ್ರಿಡ್ಜ್ ಮಾಡಲು ಅನುಮೋದನೆ ಸಿಕ್ಕಿತ್ತು. ಆದರೆ, ಆಗ ರಿಂಗ್ ರಸ್ತೆ ನಗರಾಭಿವೃದ್ಧಿ ಮುಡಾ ನಿಯಂತ್ರಣದಲ್ಲಿತ್ತು. ಮುಂದಿನ ಹಂತ ಪಿಡಬ್ಲ್ಯೂಡಿ ಮತ್ತು ನಗರಪಾಲಿಕೆ ನಿಯಂತ್ರಣದಲ್ಲಿತ್ತು. ಹಾಗಾಗಿ, ರೈಲ್ವೆ, ಮುಡಾ, ನಗರಪಾಲಿಕೆ, ಪಿಡಬ್ಲ್ಯೂಡಿ ಈ ನಾಲ್ಕು ಇಲಾಖೆ ಸೇರಿ ಒಂದೇ ಒಂದು ಫ್ಲೈ ಓವರ್ ಓವರ್ ಮಾಡಬೇಕಿತ್ತು. ಆದರೆ, ಇಲಾಖೆಗಳಲ್ಲಿನ ಹೊಂದಾಣಿಕೆ ಕೊರತೆಯಿಂದ  ಇದು ಆಗಿರಲಿಲ್ಲ. ಕೊನೆಗೆ ಅದನ್ನು ರೈಲ್ವೆ ಅಂಡರ್ ಪಾಸ್ ಮಾಡೋಣವೆಂದು ಕೊಂಡೆವು. ಆದರೆ, ರೈಲ್ವೆ ಅಂಡರ್ ಪಾಸ್ ಮಾಡಿದರೆ ಸಮಸ್ಯೆಯಾಗುತ್ತದೆ ಎಂದು ಮೊದಲಿನ ಯೋಜನೆಯಂತೆ ಫ್ಲೈ ಓವರ್ ಮಾಡಲು ತೀರ್ಮಾನಿಸಲಾಗಿದೆ ಎಂದು ವಿವರಿಸಿದರು.

ಫ್ಲೈ ಓವರ್ ನಿರ್ಮಾಣದ ಅಂದಾಜು ವೆಚ್ಚ ಈ ಹಿಂದೆ  41 ಕೋಟಿ ರೂ…!KRS Road-Fly Over-Construction-MP Pratapshinmha-Location-Verification ...!

ಫ್ಲೈ ಓವರ್ ನಿರ್ಮಾಣದ ಅಂದಾಜು ವೆಚ್ಚ ಈ ಹಿಂದೆ  41 ಕೋಟಿ ರೂ. ಆಗಿತ್ತು. ರೈಲ್ವೆಯಿಂದ 10.7 ಕೋಟಿ ರೈಲ್ವೆ ಕೊಡಬೇಕಿತ್ತು. ಅದನ್ನು ಈಗಾಗಲೇ ಮಂಜೂರು ಮಾಡಲಾಗಿದೆ. ಮುಡಾ ನಿಯಂತ್ರಣದಲ್ಲಿದ್ದಂತಹ ರಿಂಗ್ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮಾಡಿಕೊಂಡಿರುವುದರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ದೊಡ್ಡ ಮೊತ್ತದ ಹಣ ಕೊಡಬೇಕಾಗಿದೆ. ಜೊತೆಗೆ ನಗರಪಾಲಿಕೆ, ಪಿಡಬ್ಲ್ಯೂಡಿ ಅವರಿಗೆ ಸಣ್ಣ ಪ್ರಮಾಣದ ಹಣ ಕೊಡಬೇಕಾಗುತ್ತದೆ. ಅದನ್ನು  ಆದಷ್ಟು ಬೇಗ ಕೊಡಿಸಿ ಫ್ಲೈ ಓವರ್ ನಿರ್ಮಾಣ ಮಾಡಲಾಗುವುದು. ರಿವೈಸ್ಡ್  ಡಿಪಿಆರ್ ಆದ ನಂತರ ಅಂದಾಜು ವೆಚ್ಚ ಹೆಚ್ಚಾಗುವ ಸಾಧ್ಯತೆ ಇದೆ ಎಂದರು. KRS Road-Fly Over-Construction-MP Pratapshinmha-Location-Verification ...!

ಸ್ಥಳ ಪರಿಶೀಲನೆ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿಯ ಜಗದೀಶ್, ರೈಲ್ವೆ ಇಲಾಖೆಯ ಸತ್ಯನಾರಾಯಣ್, ನಗರಪಾಲಿಕೆ ಸದಸ್ಯರಾದ ಸುಬ್ಬಯ್ಯ, ಶಿವಕುಮಾರ್, ನಗರಪಾಲಿಕೆ ಅಧಿಕಾರಿಗಳು, ವಾಣಿವಿಲಾಸ ಅಧಿಕಾರಿಗಳು ಹಾಜರಿದ್ದರು.

key words : KRS Road-Fly Over-Construction-MP Pratapshinmha-Location-Verification …!