Monday, October 5, 2026

BDA Apartments

ಮತ್ತೆ ಜೆಡಿಎಸ್ ಪಕ್ಷ ವಿಸರ್ಜನೆ ಮಾತುಗಳನ್ನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರ...
Home Front Page ಸರ್ಕಾರ ಬದುಕಿದ್ರೆ ಕೂಡಲೇ ರೈತರಿಗೆ ಪರಿಹಾರ ಘೋಷಿಸಲಿ- ಆರ್.ಅಶೋಕ್

ಸರ್ಕಾರ ಬದುಕಿದ್ರೆ ಕೂಡಲೇ ರೈತರಿಗೆ ಪರಿಹಾರ ಘೋಷಿಸಲಿ- ಆರ್.ಅಶೋಕ್

ಮಂಡ್ಯ,ಜುಲೈ,4,2026 (www.justkannada.in): ರಾಜ್ಯದಲ್ಲಿ ಸರ್ಕಾರ ಬದುಕಿದ್ದರೇ ಕೂಡಲೇ ರೈತರಿಗೆ ಪರಿಹಾರ ಘೋಷಿಸಲಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದರು.

ಇಂದು ಮಂಡ್ಯ ಜಿಲ್ಲೆ ಕೆ.ಆರ್ ಎಸ್ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾತನಾಡಿದ ಆರ್.ಅಶೋಕ್,  ಕೆಆರ್ ಎಸ್ ಜಲಾಶಯದಲ್ಲಿ 6 ಟಿಎಂಸಿ ನೀರು ಮಾತ್ರ ಇದೆ. ಪ್ರತಿ ತಿಂಗಳು ಕುಡಿಯುವ ನೀರಿಗೆ 3 ಟಿಎಂಸಿ ಬೇಕು. ಬೆಳೆ ಬೆಳೆಯಬೇಡಿ ನೀರಿಲ್ಲ ಅಂತಾ ಸಿಎಂ ಡಿಕೆಶಿ ಹೇಳಿದ್ದಾರೆ . ಚಿನ್ನ ಖರೀದಿಸಬೇಡಿ ಎಂದ ಮೋದಿ ವಿರುದ್ದ ಬಾಯಿ ಬಡ್ಕೊಂಡ್ರು.  ಬರದ ಸಂದರ್ಭಧಲ್ಲಿ ರೈತರು ಸರ್ವಪಕ್ಷಗಳ ಸಭೆ ಕರೆಯಬೇಕಿತ್ತು. ರಾಜ್ಯದಲ್ಲಿ ಕೃಷಿ ಸಚಿವರಿಲ್ಲ ಸಂಪುಟ ಪೂರ್ಣಗೊಂಡಿಲ್ಲ. ದೆಹಲಿಯವರಿಗೆ ದುಡ್ಡುಕೊಟ್ಟು ಸಚಿವ ಸ್ಥಾನ ಪಡೆಯಬೇಕು. ಅದರಲ್ಲಿ ಯಾವುದೇ ಅನುಮಾನವಿಲ್ಲ.  ಡಿಕೆಶಿ ಸರ್ಕಾರ ದೆಹಲಿ ಹೈಕಮಾಂಡ್ ಗೆ ಎಟಿಎಂ ಆಗಿದೆ ಎಂದು ಲೇವಡಿ ಮಾಡಿದರು.ಸರ್ಕಾರ ಬದುಕಿದ್ರೆ ಕೂಡಲೇ ರೈತರಿಗೆ ಪರಿಹಾರ ಘೋಷಿಸಲಿ- ಆರ್.ಅಶೋಕ್ ASHOK

ಮಳೆ ಕೈಕೊಟ್ಟಿದ್ದರಿಂದ ಪರ್ಯಯ ವ್ಯವಸ್ಥೆ ಮಾಡಬೇಕಲ್ಲವಾ.  ಎಕರೆಗೆ 50 ಸಾವಿರ ರೂಪಾಯಿ ಬೆಳೆ ಹಾನಿ ಪರಿಹಾರ ಕೊಡಬೇಕು. ಕದ್ದುಮುಚ್ಚಿ ತಮಿಳುನಾಡಿಗೆ ನೀರು ಬಿಡುವ ಪ್ಲ್ಯಾನ್ ಇದೆಯಾ ಗೊತ್ತಿಲ್ಲ . ಸರ್ಕಾರ ಬದುಕಿದ್ರೆ ರೈತರಿಗೆ ಪರಿಹಾರ ಘೋಷಿಸಲಿ ಎಂದು ಆರ್.ಅಶೋಕ್ ತಿಳಿಸಿದರು.ಸರ್ಕಾರ ಬದುಕಿದ್ರೆ ಕೂಡಲೇ ರೈತರಿಗೆ ಪರಿಹಾರ ಘೋಷಿಸಲಿ jk02_new jk02 new

Key words: government, announce, compensation, farmers, KRS, R. Ashok