ಕನ್ನಂಬಾಡಿಗೆ ಮೊದಲು ಅಸ್ತಿಭಾರ ಹಾಕಿದ್ದು  ಟಿಪ್ಪುಸುಲ್ತಾನ್ : ಇಲ್ಲಿದೆ  ನೋಡಿ “ದಾಖಲೆ”.!

Tipu Sultan laid the foundation stone of Kannambadi in the 1790s. It is special because it is in Persian. Along with it, there is a letter written to Sringeri Math, which is in Kannada in the Modi script. Hyder Ali, noticing that rainwater was flowing wastefully from the hills of Thonnur village near Melukote in Pandavapura taluk, built a huge lake. Due to this, the town was named Kere Thonnur. Ramanujacharya stayed in this town for six years before moving to Melukote. Even today, both the temple and the lake there are favorite tourist destinations. Inspired by the lake built by his father Hyder Ali, Tipu Sultan first thought of building a dam across the Cauvery river near a town called Kannambadi. However, Tipu, exhausted by the constant struggle with the British, was unable to build the reservoir.

 

ಮೈಸೂರು, ಆ.೦೪,೨೦೨೫: ಕನ್ನಂಬಾಡಿ ಅಥವಾ ಕೃಷ್ಣರಾಜ ಜಲಾಶಯಕ್ಕೆ ಮೊದಲು ಅಸ್ತಿಭಾರ ಹಾಕಿದ್ದು  ಟಿಪ್ಪುಸುಲ್ತಾನ್ ಎಂಬ ಹೇಳಿಕೆ ಬಗ್ಗೆ ಇದೀಗ ಅನಗತ್ಯ ವಿವಾದ ಸೃಷ್ಠಿಯಾಗಿದೆ. ಜತೆಗೆ ಪರ-ವಿರೋಧ ಚರ್ಚೆ ಆರಂಭಗೊಂಡಿದೆ.

ಸಚಿವ ಹೆಚ್.ಸಿ. ಮಹಾದೇವಪ್ಪ ಅವರು ಶ್ರೀರಂಗಪಟ್ಟಣದಲ್ಲಿ ನೀಡಿದ ಹೇಳಿಕೆ ಮಾಧ್ಯಮಗಳಲ್ಲಿ ಬಿತ್ತರಗೊಂಡ ಹಿನ್ನೆಲೆಯಲ್ಲಿ ಈ ಚರ್ಚೆಗೆ ಹೆಚ್ಚಿನ ಪ್ರಚಾರ ಬಂದಿದೆ.

ಸಚಿವ ಡಾ.ಮಹಾದೇವಪ್ಪ ಅವರು ಹೇಳಿದ್ದು, ಟಿಪ್ಪು ಸುಲ್ತಾನ್, ಕನ್ನಂಬಾಡಿ ಕಟ್ಟೆ ನಿರ್ಮಾಣಕ್ಕೆ ಮೊದಲು ಜಾಗ ಗುರುತಿಸಿ, ಅಸ್ತಿಭಾರ ಹಾಕಿದನು. ಬಳಿಕ ಅಲ್ಲಿ ಚೆಕ್‌ ಡ್ಯಾಂಗಳನ್ನು ನಿರ್ಮಿಸಿದ ಎಂಬುದು ಹೇಳಿಕೆ ತಾತ್ಪರ್ಯ.

ನಂತರ ಮೈಸೂರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಜಲಾಶಯ ನಿರ್ಮಾಣ ಮಾಡಿದರು.  ಸಚಿವ ಡಾ.ಮಹಾದೇವಪ್ಪ,  ಟಿಪ್ಪು ಸುಲ್ತಾನನೇ ಕೆ.ಆರ್.ಎಸ್. ಜಲಾಶಯ ನಿರ್ಮಾಣ ಮಾಡಿದ್ದು ಎಂದು ಭಾಷಣದಲ್ಲಿ ಹೇಳಿಲ್ಲ ಎಂಬುದು ಗಮನಾರ್ಹ.

ಸಚಿವರ ಹೇಳಿಕೆಗೆ ಪೂರಕವಾಗಿ ಎರಡು ಪತ್ರಗಳು ದಾಖಲೆ ರೂಪದಲ್ಲಿ ಲಭ್ಯವಿದೆ. ಈ ಪೈಕಿ ಕನ್ನಂಬಾಡಿಕಟ್ಟೆಗೆ ಟಿಪ್ಪು ಸುಲ್ತಾನ್ 1790 ದಶಕದಲ್ಲಿ ಅಸ್ತಿಬಾರ ಹಾಕಿದ ಫಲಕ . ಇದು ಪರ್ಷಿಯನ್ ಭಾಷೆಯಲ್ಲಿರುವುದು ವಿಶೇಷ.  ಜತೆಗೆ ಶೃಂಗೇರಿ ಮಠಕ್ಕೆ ಬರೆದಿರುವ ಪತ್ರ, ಅದು ಮೋಡಿ ಲಿಪಿಯ ಕನ್ನಡದಲ್ಲಿದೆ.

ಪಾಂಡವಪುರ ತಾಲ್ಲೂಕಿನ ಮೇಲುಕೋಟೆ ಬಳಿ ತೊಣ್ಣೂರು ಗ್ರಾಮದ ಬೆಟ್ಟ ಗುಡ್ಡಗಳಿಂದ ಮಳೆ ನೀರು ವ್ಯರ್ಥವಾಗಿ ಹರಿದು ಹೋಗುವುದನ್ನು ಗಮನಿಸಿದ ಹೈದರಾಲಿ, ಬೃಹತ್ ಕೆರೆ ನಿರ್ಮಾಣ ಮಾಡಿದನು. ಇದರಿಂದಾಗಿ ಆ ಊರಿಗೆ ಕೆರೆತೊಣ್ಣೂರು ಎಂಬ ಹೆಸರು ಬಂದಿತು. ರಾಮಾನುಜಾಚಾರ್ಯರು ಮೇಲುಕೋಟೆಗೆ ತೆರಳುವ ಮುನ್ನ ಈ ಊರಿನಲ್ಲಿ ಆರು ವರ್ಷಗಳ ಕಾಲ ತಂಗಿದ್ದರು. ಈಗಲೂ ಅಲ್ಲಿನ ದೇವಸ್ಥಾನ ಮತ್ತು ಕೆರೆ ಎರಡೂ ಪ್ರವಾಸಿಗರ ಅಚ್ಚುಮೆಚ್ಚಿನ ತಾಣಗಳಾಗಿವೆ.

ತಂದೆ ಹೈದರಾಲಿ ನಿರ್ಮಿಸಿದ ಕೆರೆಯಿಂದ ಪ್ರೇರಿತನಾಗಿ ಟಿಪ್ಪು ಸುಲ್ತಾನ್, ಕಾವೇರಿ ನದಿಗೆ ಅಡ್ಡಲಾಗಿ ಕನ್ನಂಬಾಡಿ ಎಂಬ ಊರಿನ ಬಳಿ ಅಣೆಕಟ್ಟು ನಿರ್ಮಿಸಲು ಪ್ರಥಮ ಬಾರಿಗೆ ಆಲೋಚಿಸಿದನು. ಆದರೆ, ನಿರಂತರ ಬ್ರಿಟಿಷರ ಜೊತೆಗಿನ ಹೋರಾಟದಲ್ಲಿ ಹೈರಾಣಾದ ಟಿಪ್ಪುವಿಗೆ ಜಲಾಶಯ ನಿರ್ಮಾಣ ಸಾಧ್ಯವಾಗಲಿಲ್ಲ.

  • ಮಾಹಿತಿ, ಚಿತ್ರ ಕೃಪೆ:  ಜಗದೀಶ್ ಕೊಪ್ಪ, ಮೈಸೂರು.

key words: Tipu Sultan, lay the foundation, Kannambadi, KRS Dam,

SUMMARY:

Tipu Sultan was the first to lay the foundation of Kannambadi: See the “document” here!

Tipu Sultan laid the foundation stone of Kannambadi in the 1790s. It is special because it is in Persian. Along with it, there is a letter written to Sringeri Math, which is in Kannada in the Modi script.

Hyder Ali, noticing that rainwater was flowing wastefully from the hills of Thonnur village near Melukote in Pandavapura taluk, built a huge lake. Due to this, the town was named Kere Thonnur. Ramanujacharya stayed in this town for six years before moving to Melukote. Even today, both the temple and the lake there are favorite tourist destinations.

Inspired by the lake built by his father Hyder Ali, Tipu Sultan first thought of building a dam across the Cauvery river near a town called Kannambadi. However, Tipu, exhausted by the constant struggle with the British, was unable to build the reservoir.