ಮಂಡ್ಯ,ಜುಲೈ,29,2025 (www.justkannada.in): ರಾಜ್ಯದಲ್ಲಿ ಮುಂಗಾರಿನಲ್ಲಿ ಉತ್ತಮ ಮಳೆಯಾಗುತ್ತಿದ್ದು ಜಲಾಶಯಗಳು ಬಹುತೇಕ ಭರ್ತಿಯಾಗಿದೆ. ಈ ನಡುವೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿರುವ ಕೆಆರ್ ಎಸ್ ಜಲಾಶಯದಿಂದ ನದಿಗೆ ಭಾರಿ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗಿದೆ.
ಕೆಆರ್ ಎಸ್ ಜಲಾಶಯದಿಂದ ನದಿಗೆ 83 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದ್ದು, ನಿಮಿಷಾಂಬ ದೇವಾಲಯದ ಸ್ನಾನಘಟ್ಟ ಮುಳುಗಡೆಯಾಗಿದೆ. ಬಟ್ಟೆ ಬದಲಿಸುವ ಕೊಠಡಿ ನದಿ ಪಕ್ಕದ ಮಂಟಪ ಮುಳುಗಡೆಯಾಗಿದ್ದು, ನದಿ ಯಸಮೀಪ ತೆರಳದಂತೆ ಭಕ್ತರಿಗೆ ಶ್ರೀರಂಗಪಟ್ಟಣ ತಾಲ್ಲೂಕು ಆಡಳಿತ ಸೂಚನೆ ನೀಡಿದೆ.
ನೀರು ಬಿಡುಗಡೆ ಹಿನ್ನೆಲೆಯಲ್ಲಿ ನದಿಪಾತ್ರದ ಜಮೀನು ಮತ್ತು ಮನೆಗಳಿಗೂ ನೀರು ನುಗ್ಗಿದೆ ಎನ್ನಲಾಗಿದೆ.
Key words: water, release , KRS Dam, Cavery river