ಮೈಸೂರಿನ ಕೃಷ್ಣರಾಜೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆ.

ಮೈಸೂರು,ಜನವರಿ,14,2022(www.justkannada.in):  ನಗರದ ಅಗ್ರಹಾರದಲ್ಲಿರುವ ಪ್ರತಿಷ್ಠಿತ ಸಹಕಾರಿ ಬ್ಯಾಂಕ್ ನ  ಕೃಷ್ಣರಾಜೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷರ ವಿರುದ್ಧ ಬ್ಯಾಂಕ್ ನ ಉಪಾಧ್ಯಕ್ಷ ರು ಹಾಗೂ ನಿರ್ದೇಶಕರುಗಳು ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದಾರೆ.

ಕೃಷ್ಣರಾಜೇಂದ್ರ ಸಹಕಾರಿ ಬ್ಯಾಂಕ್ ನ ಬ್ಯಾಂಕ್ ಅಧ್ಯಕ್ಷ  ತಾಯೂರು ವಿಠಲಮೂರ್ತಿ ಅವರು ಯಾವುದೇ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಸ್ಪಂದಿಸದೆ ಸಹಕಾರ ನೀಡುತ್ತಿಲ್ಲ.  ಸದರಿ ಅಧ್ಯಕ್ಷರ ಮೇಲೆ ಬ್ಯಾಂಕ್ ನ ಉಪಾಧ್ಯಕ್ಷರೂ ಸೇರಿದಂತೆ ಎಲ್ಲ ನಿರ್ದೇಶಕರು, ಆಡಳಿತ ಮಂಡಳಿಯ ಸದಸ್ಯರುಗಳಾದ ನಮಗೆ ವಿಶ್ವಾಸವಿಲ್ಲ.  ಹಾಗೂ ಅಧ್ಯಕ್ಷರ ಬ್ಯಾಂಕ್ ನ ಪದಾಧಿಕಾರಿಗಳಿಗೆ ಆಯ್ಕೆಯಾಗಿ 28 ತಿಂಗಳು ಪೂರ್ಣಗೊಂಡಿರುವುದರಿಂದ ಬ್ಯಾಂಕ್ ಅಧ್ಯಕ್ಷ  ತಾಯೂರು ವಿಠಲಮೂರ್ತಿ ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿ ನಿರ್ಣಯ ಮಂಡಿಸಬೇಕೆಂದು ಎಲ್ಲಾ ನಿರ್ದೇಶಕರುಗಳು ತೀರ್ಮಾನಿಸಿದ್ದು ಈ ಬಗ್ಗೆ ಕಾನೂನು ರೀತಿ ಸೂಕ್ತ ಕ್ರಮ ಕೈಗೊಳ್ಳಲು ಸಕ್ಷಮ ಪ್ರಾಧಿಕಾರವನ್ನು ನಿಯಮಾನುಸಾರ ಕೋರುವಂತೆ ಬ್ಯಾಂಕ್ ನ ಪ್ರಭಾವಿ ವ್ಯವಸ್ಥಾಪಕ ಅನಂತ್ ವೀರಪ್ಪ ರವರಿಗೆ  ಮನವಿ ಪತ್ರ ಸಲ್ಲಿಸಲಾಯಿತು.

ಇದೇ ಸಂದರ್ಭದಲ್ಲಿ ಬ್ಯಾಂಕ್ ನ ಉಪಾಧ್ಯಕ್ಷದ ಬಸವರಾಜ್ (ಬಸಪ್ಪ ) ,ನಿರ್ದೇಶಕರುಗಳಾದ ಸಿದ್ದಪ್ಪ ಎಂ ಡಿ ಪಾರ್ಥಸಾರಥಿ, ನವೀನ್ ಕುಮಾರ್, ಎಚ್ ವಿ ಭಾಸ್ಕರ್, ಅರುಣ್ ,ಪ್ರತಿಧ್ವನಿ ಪ್ರಸಾದ್ ,ಹಾಗೂ ಇನ್ನಿತರರು ಹಾಜರಿದ್ದರು.

Key words: Krishna Rajendra -Co-operative Bank – Chairman-mysore