Sunday, September 20, 2026

BDA Apartments

ಕೆ.ಆರ್ ಪುರಂ ಬೈ ಎಲೆಕ್ಷನ್: ತಾಕತ್ತಿದ್ರೆ ಜೋಡೆತ್ತು ತಡೆಯಲಿ- ಕಾಂಗ್ರೆಸ್ ಗೆ ...
Home Front Page ಕೆ.ಆರ್ ಪುರಂ ಬೈ ಎಲೆಕ್ಷನ್: ತಾಕತ್ತಿದ್ರೆ ಜೋಡೆತ್ತು ತಡೆಯಲಿ- ಕಾಂಗ್ರೆಸ್ ಗೆ ನಳೀನ್ ಕುಮಾರ್ ಕಟೀಲು...

ಕೆ.ಆರ್ ಪುರಂ ಬೈ ಎಲೆಕ್ಷನ್: ತಾಕತ್ತಿದ್ರೆ ಜೋಡೆತ್ತು ತಡೆಯಲಿ- ಕಾಂಗ್ರೆಸ್ ಗೆ ನಳೀನ್ ಕುಮಾರ್ ಕಟೀಲು ಸವಾಲು…

ಬೆಂಗಳೂರು,ನ,25,2019(www.justkannada.in): ಕೆ.ಆರ್ ಪುರಂ ಉಪಚುನಾವಣೆ ಹಿನ್ನೆಲೆ, ಕೆ.ಆರ್ ಪುರಂನಲ್ಲಿ ನಂದೀಶ್ ರೆಡ್ಡಿ ಮತ್ತು ಭೈರತಿ ಬಸವರಾಜು ಎಂಬ ಜೋಡೆತ್ತುಗಳನ್ನ ಬಿಟ್ಟಿದ್ದೇವೆ. ತಾಕತ್ತಿದ್ದರೇ ಜೋಡೆತ್ತುಗಳನ್ನ ತಡೆಯಲಿ ಎಂದು ಕಾಂಗ್ರೆಸ್ ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್  ಸವಾಲು ಹಾಕಿದರು.

ಬೆಂಗಳೂರಿನ ಕೆ.ಆರ್ ಪುರಂನ ಚುನಾವಣಾ ಪ್ರಚಾರದಲ್ಲಿ ಇಂದು ಮಾತನಾಡಿದ ನಳೀನ್ ಕುಮಾರ್ ಕಟೀಲ್,  ತಾಜ್ ಹೋಟೆಲ್ ನಿಂದ ಹೆಚ್.ಡಿ ಕುಮಾರಸ್ವಾಮಿ ಅಧಿಕಾರ ನಡೆಸುತ್ತಿದ್ದರು. ಅವರು ಶಾಸಕರ ಕೈಗೆ ಸಿಗುತ್ತಿರಲಿಲ್ಲ. ಹೀಗಾಗಿ 17 ಮಂದಿ ಶಾಸಕರು ಬೇಸತ್ತು ರಾಜೀನಾಮೆ ನೀಡಿ ಹೊರಬಂದಿದ್ದಾರೆ ಎಂದರು.

ಅನಿವಾರ್ಯವಾಗಿ ಉಪ ಚುನಾವಣೆ ಬಂದಿದೆ, ರಾಜ್ಯದಲ್ಲಿ ಬಿಜೆಪಿ ಪರ ಅಲೆ ಜೋರಾಗಿದ್ದು, ರಾಜ್ಯದ 15 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುತ್ತೆ. ಅತಿ ಹೆಚ್ಚು ಬಹುಮತದಿಂದ ಭೈರತಿ ಬಸವರಾಜ್ ಗೆಲ್ತಾರೆ. ಅವ್ರ ಸಾಧನೆ, ಅಭಿವೃದ್ಧಿ ಕೆಲಸ, ಯಡಿಯೂರಪ್ಪನವರ ಅಭಿವೃದ್ಧಿ ಕೆಲಸದಿಂದ ಬಿಜೆಪಿ ಅಭೂತಪೂರ್ವವಾಗಿ ಗೆಲ್ಲುತ್ತೆ ಎಂದು ಹೇಳಿದರು.

Key words: KR Puram -by Election-stop-jodetthu- bjp-president-Nalin Kumar katil-challenge