Sunday, August 2, 2026

BDA Apartments

Home Front Page ಕೆ.ಆರ್ ಪೇಟೆ ಉಪಚುನಾವಣೆ: ಸಂಸದ ಸುಮಲತಾ ಅಂಬರೀಶ್ ಆಪ್ತರ ಜತೆ ಮಾತುಕತೆ: ಬೆಂಬಲ ಕೋರಿದ ಸಿಎಂ...

ಕೆ.ಆರ್ ಪೇಟೆ ಉಪಚುನಾವಣೆ: ಸಂಸದ ಸುಮಲತಾ ಅಂಬರೀಶ್ ಆಪ್ತರ ಜತೆ ಮಾತುಕತೆ: ಬೆಂಬಲ ಕೋರಿದ ಸಿಎಂ ಬಿಎಸ್ ಯಡಿಯೂರಪ್ಪ….

ಮೈಸೂರು,ನ,26,2019(www.justkannada.in): ಕೆ.ಆರ್ ಪೇಟೆ ಉಪಚುನಾವಣಾ ಕಣ ರಂಗೇರಿದ್ದು ಬಿಜೆಪಿ ಅಭ್ಯರ್ಥಿ ನಾರಾಯಣಗೌಡರನ್ನ ಗೆಲ್ಲಿಸಲೇಬೇಕೆಂದು ಪಣ ತೊಟ್ಟಿರುವ ಸಿಎಂ ಬಿಎಸ್ ಯಡಿಯೂರಪ್ಪ ಇದೀಗ ಮಂಡ್ಯ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಅವರ ಬೆಂಬಲ ಕೋರಿದ್ದಾರೆ.

ಮೈಸೂರಿನ ವಿಮಾನನಿಲ್ದಾಣದಲ್ಲಿ ಸಂಸದೆ ಸುಮಲತಾ ಅಂಬರೀಶ್ ಅವರ ಆಪ್ತ ಇಂಡವಾಳು ಸಚ್ಚಿದಾನಂದ ಅವರನ್ನ ಸಿಎಂ ಬಿಎಸ್ ಯಡಿಯೂರಪ್ಪ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಈ ವೇಳೆ ಬಿಜೆಪಿ ಅಭ್ಯರ್ಥಿ ಬೆಂಬಲಿಸವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಸಿಎಂ ಬಿಎಸ್ ವೈ ಮಾತುಕತೆ ಬಳಿಕ ಮಾತನಾಡಿರುವ ಆಪ್ತ ಇಂಡವಾಳು ಸಚ್ಚಿದಾನಂದ,  ಸಿಎಂ ಬಿಎಸ್ ವೈ ಸುಮಲತಾ ಅಂಬರೀಶ್ ಅವರ ಬೆಂಬಲ ಕೋರಿದ್ದಾರೆ. ಎರಡು ಮೂರು ಬಾರಿ ಸಿಎಂ ಬಿಎಸ್ ವೈ ಮಾತನಾಡಿದ್ದಾರೆ.  ಆದ್ರೆ ಸದ್ಯಕ್ಕೆ ಯಾವ ಪಕ್ಷದ ಪರವೂ ಇಲ್ಲ. ಒಂದೆರೆಡು ಮೂರು ದಿನಗಳಲ್ಲಿ ಸುಮಲತಾ ಅಂಬರೀಶ್ ತಮ್ಮ ನಿರ್ಧಾರ ತಿಳಿಸುತ್ತಾರೆ. ನಂತರ ಆ ಕ್ಷೇತ್ರದಲ್ಲಿ ಕೆಲಸ ಮಾಡುತ್ತೇವೆ ಎಂದರು.

Key words: KR Pete- by-election-CM BS Yeddyurappa –appeal-support-MP- Sumalatha Ambarish