Thursday, August 20, 2026

BDA Apartments

Home Front Page ಕೆಪಿಎಲ್ ಫಿಕ್ಸಿಂಗ್ ಹಗರಣ: ಸಿಎಂ ಗೌತಮ್, ಅಬ್ರಾರ್ ಖಾಜಿ ಬಂಧನ

ಕೆಪಿಎಲ್ ಫಿಕ್ಸಿಂಗ್ ಹಗರಣ: ಸಿಎಂ ಗೌತಮ್, ಅಬ್ರಾರ್ ಖಾಜಿ ಬಂಧನ

ಬೆಂಗಳೂರು, ನವೆಂಬರ್ 07, 2019 (www.justkannada.in): ಕರ್ನಾಟಕ ಪ್ರೀಮಿಯರ್ ಲೀಗ್ ಫಿಕ್ಸಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಇಬ್ಬರು ಕ್ರಿಕೆಟಿಗರನ್ನು ಗುರುವಾರ ಬಂಧಿಸಲಾಗಿದೆ.

ಬಳ್ಳಾರಿ ಟಸ್ಕರ್ಸ್ ನಾಯಕ ಸಿಎಂ ಗೌತಮ್, ಮಾಜಿ ಕರ್ನಾಟಕದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಮತ್ತು ಅವರ ಸಹ ಆಟಗಾರ ಅಬ್ರಾರ್ ಖಾಜಿಯನ್ನು ನಗರ ಕೇಂದ್ರ ಅಪರಾಧ ಶಾಖೆ ಬಂಧಿಸಿದೆ.

ಕೆಪಿಎಲ್ ಫಿಕ್ಸಿಂಗ್ಗೆ ಸಂಬಂಧಿಸಿದಂತೆ ನಾವು ಇಬ್ಬರು ಆಟಗಾರರನ್ನು ಬಂಧಿಸಿದ್ದೇವೆ’ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ತನಿಖೆ ಮುಂದುವರೆದಂತೆ ಇನ್ನೂ ಕೆಲವು ಮಂದಿಯನ್ನು ಬಂಧಿಸುವ ಸುಳಿವು ನೀಡಿದ್ದಾರೆ.