ಖುದ್ದು ಭೇಟಿ ಮಾಡುವಂತೆ ಶಾಸಕ ತನ್ವೀರ್ ಸೇಠ್ ಗೆ ಡಿ.ಕೆ ಶಿವಕುಮಾರ್ ಬುಲಾವ್…

ಮೈಸೂರು,ಫೆಬ್ರವರಿ,26,2021(www.justkannada.in): ಕೆಪಿಸಿಸಿಯಿಂದ ನೋಟಿಸ್ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ವಿರುದ್ದ ಶಾಸಕ ತನ್ವೀರ್ ಸೇಠ್ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ಧರು. ಈ  ಬೆನ್ನಲೆ ಇದೀಗ ಶಾಸಕ ತನ್ವೀರ್ ಸೇಠ್ ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಖುದ್ದು ಭೇಟಿ ಮಾಡುವಂತೆ ಬುಲಾವ್ ನೀಡಿದ್ದಾರೆ.jk

ದೂರವಾಣಿ ಕರೆ ಮೂಲಕ ಶಾಸಕ  ತನ್ವೀರ್ ಸೇಠ್ ಗೆ  ಡಿ.ಕೆ ಶಿವಕುಮಾರ್ ಖುದ್ದು ಭೇಟಿ ಮಾಡುವಂತೆ ಬುಲಾವ್ ನೀಡಿದ್ದಾರೆ. ಮೈಸೂರು ಪಾಲಿಕೆ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಬಳಿಕ ಶಾಸಕರ ನಡೆಯನ್ನ ರಾಜ್ಯ ನಾಯಕರು ವಿರೋಧಿಸಿದ್ದರು.kpcc-president-DK Shivakumar - MLA -Tanveer Sait  - meet

ಇದೇ ಬೆನ್ನಲ್ಲೆ ತನ್ವಿರ್ ಸೇಠ್ ಗೆ ನೋಟಿಸ್ ನೀಡಬೇಕೆಂದು ಮಾಜಿ ಸಚಿವ ರಮೇಶ್ ಕುಮಾರ್ ಹೇಳಿಕೆ ನೀಡಿದ್ದರು. ರಮೇಶ್ ಕುಮಾರ್ ಹೇಳಿಕೆ ಖಂಡಿಸಿ ಬೆಳಗ್ಗೆ ಶಾಸಕ ತನ್ವೀರ್ ಸೇಠ್ ಮನೆ ಮುಂದೆ ಸಿದ್ದರಾಮಯ್ಯ,ರಮೇಶ್ ಕುಮಾರ್ ವಿರುದ್ದ ತನ್ವೀರ್ ಸೇಠ್ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದರು.

Key words: kpcc-president-DK Shivakumar – MLA -Tanveer Sait  – meet