ನಾನು ಬೀದಿಯಲ್ಲಿ ಹೋಗಿ ಅವರೊಂದಿಗೆ ಕುಸ್ತಿ ಮಾಡಬೇಕೆ..? ಗೃಹ ಸಚಿವ ಅರಗ ಜ್ಞಾನೇಂದ್ರ ಕಿಡಿ.

ಬೆಂಗಳೂರು,ಜನವರಿ,8,2022(www.justkannada.in):  ನಾವು ಪಾದಯಾತ್ರೆ ಮಾಡೇ ಮಾಡುತ್ತೇವೆ.  ತಾಕತ್ತಿದ್ದರೆ ಕಾಂಗ್ರೆಸ್ ಪಾದಯಾತ್ರೆ ತಡೆಯಲಿ ಎಂದು ಹೇಳಿಕೆ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಗೃಹ ಸಚಿವ ಅರಗ ಜ್ಞಾನೇಂದ್ರ ವಾಗ್ದಾಳಿ ನಡೆಸಿದ್ದಾರೆ.

ನಾನು ಬೀದಿಯಲ್ಲಿ ಹೋಗಿ ಅವರೊಂದಿಗೆ ಕುಸ್ತಿ ಮಾಡಬೇಕೆ? ಡಿ.ಕೆ.ಶಿವಕುಮಾರ್ ನನಗಿಂತ ಕಿರಿಯರು ಇಂತಹ ಮಾತು ನಿರೀಕ್ಷಿಸಿರಲಿಲ್ಲ ಎಂದು ಕಿಡಿಕಾರಿದರು.

ಇಂದು ಮಾಧ್ಯಮಗಳ ಜತೆ ಮಾತನಾಡಿದ ಅರಗ ಜ್ಞಾನೇಂದ್ರ,  ಡಿ.ಕೆ.ಶಿವಕುಮಾರ್ ಲಘುವಾಗಿ ಮಾತನಾಡುತ್ತಿದ್ದಾರೆ. ತೊಡೆ ತಟ್ಟೋದು, ಸವಾಲು ಹಾಕೋದು, ವೀರಾವೇಶದ ಮಾತನಾಡುವುದು ಮಾಡುತ್ತಿದ್ದಾರೆ. ಇದೆಲ್ಲವನ್ನೂ ಜನರು ನೋಡುತ್ತಿದ್ದಾರೆ. ಕಾನೂನು ಎಲ್ಲರಿಗೂ ಒಂದೇ ಅದು ಬಿಜೆಪಿಗೆ ಬೇರೆ, ಕಾಂಗ್ರೆಸ್ ಗೆ ಬೇರೆ, ಜೆಡಿಎಸ್ ಗೆ ಬೇರೆ ಕಾನೂನು ಇಲ್ಲ ಎಂದು ಸಚಿವ ಅರಗ ಜ್ಞಾನೇಂದ್ರ ಹರಿಹಾಯ್ದರು.

ರಾಜ್ಯದಲ್ಲಿ ಕೊರೊನಾ, ಒಮಿಕ್ರಾನ್ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪರಿಸ್ಥಿತಿ ಗಂಭೀರತೆ ಅರಿತು ತಾಳ್ಮೆಯಿಂದ ಯೋಚನೆ ಮಾಡಲಿ. ಇಂಥ ಸಂದರ್ಭದಲ್ಲಿ ರಾಜಕೀಯ ಹೋರಾಟ ಸರಿಯಲ್ಲ. ಪಾದಯಾತ್ರೆ ಮಾಡುವುದನ್ನು ಬಿಟ್ಟು ಜವಾಬ್ದಾರಿಯಿಂದ ವರ್ತಿಸಲಿ ಎಂದು ಸಲಹೆ ನೀಡಿದ್ದಾರೆ.

Key wprds : kpcc-president-DK Shivakumar- Home Minister- Arag Gnanendra