Saturday, August 15, 2026

BDA Apartments

Home Front Page ಸತೀಶ್ ಜಾರಕಿಹೊಳಿ ಹೇಳಿಕೆಯನ್ನ ಖಂಡಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್.

ಸತೀಶ್ ಜಾರಕಿಹೊಳಿ ಹೇಳಿಕೆಯನ್ನ ಖಂಡಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್.

ಬೆಂಗಳೂರು,ನವೆಂಬರ್,9,2022(www.justkannada.in):  ಹಿಂದೂ ಪದದ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ನೀಡಿರುವ ಹೇಳಿಕೆಯನ್ನ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಖಂಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಡಿ.ಕೆ ಶಿವಕುಮಾರ್, ಸತೀಶ್ ಜಾರಕಿಹೊಳಿ  ಹೇಳಿಕೆಯನ್ನ ಪಕ್ಷದ ಅಧ್ಯಕ್ಷನಾಗಿ ಖಂಡಿಸುತ್ತೇನೆ ಸತೀಶ್ ಜಾರಕಿಹೊಳಿ ಯಾವುದೋ ಪುಸ್ತಕದಲ್ಲಿಇದೆ ಎಂದಿದ್ದಾರೆ. ಅದು ಯಾವ ಪುಸ್ತಕ ಅಂತಾ ಗೊತ್ತಿಲ್ಲ. ಸತೀಶ್ ಜಾರಕಿಹೊಳಿ ಹೇಳಿಕೆಯನ್ನ ಸಮರ್ಥಿಸಿಕೊಳ್ಳಲ್ಲ. ಖಂಡಿಸುತ್ತೇನೆ ಎಂದು ಹೇಳಿದರು.

ಬಾದಾಮಿ ಕ್ಷೇತ್ರಕ್ಕೆ ರಹಸ್ಯ ಭೇಟಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್,  ರಾಜಕೀಯದ ಜೊತೆಗೆ ವೈಯಕ್ತಿಕ ಕೆಲಸಗಳೂ ಇರುತ್ತವೆ.  ಖಾಸಗಿ ಕೆಲಸದ ನಿಮಿತ್ತ ಬಾಗಲಕೋಟೆಗೆ ಭೇಟಿ ನೀಡಿದ್ದು ನಿಜ.  ರಸ್ತೆ ಬದಿ ಕಾರು ನಿಲ್ಲಿಸಿ ಬಾಳೆಹಣ್ಣು ಬಿಸ್ಕತ್ ತಿಂದೆ.  ಯಾರೋ ಯುವಕ ಬಂದು ಫೋಟೋ ತೆಗೆದುಕೊಳ್ಳುವೆ ಎಂದ. ನನ್ನ ಜತೆ ಫೋಟೊ ತೆಗಿಸಿಕೊಂಡು ಹೋದ. ನಾನು ವೈಯಕ್ತಿಕ ಕೆಲಸಕ್ಕೆ ಓಡಾಡಲೇ ಬಾರದಾ..? ಎಂದು ಪ್ರಶ್ನಿಸಿದರು.

Key words:  KPCC President -DK Shivakumar- condemned- Sathish Jarakiholi-statement.