ಸಚಿವ ಪ್ರಭು ಚೌಹಾಣ್ ಕಾರಿಗೆ ಮುತ್ತಿಗೆ ಹಾಕಲು ಯತ್ನಿಸಿದವರು ಪೊಲೀಸರ ವಶಕ್ಕೆ.

ಕೊಪ್ಪಳ,ಸೆಪ್ಟಂಬರ್,2,2021(www.justkannada.in): ಸದಾಶಿವ ಆಯೋಗದ ವರದಿ  ಒಪ್ಪಲ್ಲ ಎಂದಿದ್ದ ಪಶುಸಂಗೋಪನಾ ಸಚಿವ  ಸಚಿವ ಪ್ರಭು ಚವ್ಹಾಣ್  ವಿರುದ್ಧ ದಲಿತ ಸಂಘಟನೆಗಳು ಕಪ್ಪು ಬಟ್ಟೆ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.

ಕೊಪ್ಪಳದ ಜಿಲ್ಲಾಡಳಿತ ಭವನದ ಬಳಿ ಸಚಿವ ಪ್ರಭುಚೌಹಾಣ್  ಕಾರಿಗೆ ದಲಿತಸಂಘಟನೆ ಕಾರ್ಯಕರ್ತರು  ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಈ ವೇಳೆ ಪ್ರತಿಭಟನಾಕಾರರನ್ನ ಪೊಲೀಸರು ವಶಕ್ಕೆ ಪಡೆದು ವಾಹನದಲ್ಲಿ ಕರೆದೊಯ್ದರು. ಸಚಿವ ಪ್ರಭುಚೌಹಣ್ ಪೊಲೀಸರ ಭದ್ರತೆಯಲ್ಲಿ ತೆರಳಿದರು.

Key words: koppal- Minister -Prabhu Chauhan’-protest