ಹುಲಿ ಯಾವತ್ತೂ ಸಣ್ಣ ಪುಟ್ಟ ಬೇಟೆಯಾಡಲ್ಲ: ಕಾದು ನೋಡಿ ದೊಡ್ಡ ಜಿಂಕೆಯನ್ನೇ ಬೇಟೆಯಾಡುತ್ತೆ-ಮಾಜಿ ಸಚಿವ ಜನಾರ್ಧನ ರೆಡ್ಡಿ ಪರೋಕ್ಷ ಟಾಂಗ್.

ಕೊಪ್ಪಳ,ಮಾರ್ಚ್,8,2023(www.justkannada.in): ನಾನು ಜಾತಿ ನಂಬಿಕೊಂಡು ಬೆಳೆದಿಲ್ಲ.  ಜನ ನಂಬಿಕೊಂಡು ಬೆಳೆದಿದ್ದೇನೆ. ಹುಲಿ ಯಾವತ್ತೂ ಸಣ್ಣ ಪುಟ್ಟ ಬೇಟೆಯಾಡಲ್ಲ. ಕಾದು ನೋಡಿ ದೊಡ್ಡ ಜಿಂಕೆಯನ್ನೇ ಬೇಟೆಯಾಡುತ್ತೆ ಎಂದು ಬಿಜೆಪಿಗೆ ಮಾಜಿ ಸಚಿವ ಜನಾರ್ಧನ ರೆಡ್ಡಿ ಪರೋಕ್ಷ ಟಾಂಗ್ ನೀಡಿದರು.

ಕೊಪ್ಪಳದ ಕನಕಗಿರಿಯಲ್ಲಿ ಮಾತನಾಡಿದ ಜನಾರ್ದನರೆಡ್ಡಿ, ನಾನು ಬೆಂಗಳೂರಿನ ಯಾವುದೇ ಕ್ಷೇತ್ರದಲ್ಲಿ ನಂತರೂ ಶಾಸಕನಾಗುತ್ತಿದ್ದೆ. ನನಗೆ ಕನಕಗಿರಿ ಕ್ಷೇತ್ರದ ಅಭ್ಯರ್ಥಿ ಘೋಷಣೆ ಮಾಡಬೇಡಿ ಎಂದಿದ್ದರು ಆದರೆ ನಾನು ಕಾಯುವ ಜಾಯಮಾನದವನಲ್ಲ.   ಇಲ್ಲಿ ಸೇರಿದ ಜನ ನೋಡಿದರೇ 20 ಮಾತ್ರೆ ತೆಗದುಕೊಳ್ಳವವರು 40 ಮಾತ್ರೆ ತೆಗೆದುಕೊಳ್ಳುತ್ತಾರೆ ಎಂದು ಸಚಿವ ಶ್ರೀರಾಮುಲುಗೆ ಪರೋಕ್ಷ ಟಾಂಗ್ ನೀಡಿದರು.

ಬಿಎಸ್ ವೈರನ್ನ ಸಿಎಂ ಮಾಡಿದ್ದು ನಾನು ಅಂತ  ಜನರು ಹೇಳುತ್ತಿದ್ದಾರೆ. ಕಲ್ಬುರ್ಗಿ ವಿಮಾನ ನಿಲ್ದಾಣ ಮಾಡಿದ್ದು ನಾನು. ಬಳ್ಳಾರಿ ವಿಮಾನ ನಿರ್ಮಿಸುವ ಕನಸಿತ್ತು. ಅದು ಅರ್ಧಕ್ಕೆ ನಿಂತಿದೆ. ಇನ್ನೊಂದು ವರ್ಷದಲ್ಲಿ ನಾವು ಅಧಿಕಾರಕ್ಕೆ ಬಂದರೇ ವಿಮಾನ ನಿಲ್ದಾಣ ಪೂರ್ಣಗೊಳಿಸುತ್ತೇವೆ ಎಂದರು.

ಕೆಲ ಹುಚ್ಚು ರಾಜಕಾರಣಿಗಳು 12 ವರ್ಷದಿಂದ ರೆಡ್ಡಿ ರಾಜಕೀಯದಿಂದ ದೂರವಿದ್ದಾನೆ ರಾಜಕೀಯ ಜೀವನ ಮುಗಿಯಿತು ಎಂದುಕೊಂಡಿದ್ದರು. ಹುಲಿ ಯಾವತ್ತೂ ಸಣ್ಣ ಪುಟ್ಟ ಬೇಟೆಯಾಡಲ್ಲ. ಹುಲಿ ಕಾದು ನೋಡಿ ದೊಡ್ಡ ಜಿಂಕೆಯನ್ನೇ ಭೇಟೆಯಾಡುತ್ತೆ. ಬೋನ್ ನಲ್ಲಿದ್ದರೂ ಜೈಲಿನಲ್ಲಿದ್ದರೂ ಹುಲಿ ಹುಲಿನೇ ಎಂದು ಹೇಳಿದರು.

Key words: koppal-Janardhan reddy-tong-bjp