ಬೆಂಗಳೂರು,ಜನವರಿ,3,2026 (www.justkannada.in): ಕೋಗಿಲು ಲೇಔಟ್ ನಲ್ಲಿ ಅನಧಿಕೃತ ಮನೆಗಳ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ನಿರಾಶ್ರಿತರ ಮಾಹಿತಿ ಜಿಬಿಎ ಕೈಸೇರಿದ್ದು ಒಟ್ಟು 188 ಮನೆಗಳನ್ನು ಗುರುತಿಸಲಾಗಿದೆ.
ಕಂದಾಯ ಇಲಾಖೆ ಮತ್ತು ಉತ್ತರ ನಗರ ಪಾಲಿಕೆಯಿಂದ ಜಿಬಿಎಗೆ ವರದಿ ಸಲ್ಲಿಕೆ ಮಾಡಲಾಗಿದ್ದು, 167 ಮನೆಗಳ ತೆರವಿನಲ್ಲಿ 188 ಕುಟುಂಬಗಳು ನಿರಾಶ್ರಿತರಾಗಿದ್ದಾರೆ ಎಂಬ ಮಾಹಿತಿ ಇದೆ. 188 ಕುಟುಂಬಗಳ ಒಟ್ಟು 1007 ಜನ ಸದಸ್ಯರು ಸದ್ಯದ ಅಧಿಕೃತ ನಿರಾಶ್ರಿತರಾಗಿದ್ದಾರೆ. 188 ಕುಟುಂಬದ ಮುಖ್ಯಸ್ಥರು 475 ಜನ ವಯಸ್ಕರು, 34 ಮಕ್ಕಳು ಮುಸ್ಲಿಂ ಕುಟುಂಬಗಳು 156, ಹಿಂದೂ 31 ಹಾಗೂ ಕ್ರಿಶ್ಚಿಯನ್ 1 ಕುಟುಂಬ ನಿರಾಶ್ರಿತರಾಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ಮತ್ತೊಮ್ಮೆ ಪರಿಶೀಲನೆ ಬಳಿಕ ಜಿಬಿಎ ಸರ್ಕಾರಕ್ಕೆ ಈ ವರದಿಯನ್ನು ಸಲ್ಲಿಸಲಿದೆ ಎನ್ನಲಾಗಿದೆ. ಯಲಹಂಕ ಬಳಿಯ ಫಕೀರ ಲೇಔಟ್, ಹೊಸ ಫಕಿರ್ ಲೇಔಟ್, ವಾಸಿಂ ಲೇಔಟ್ ನಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿದ್ದನ್ನು ಸರ್ಕಾರ ತೆರವುಗೊಳಿಸಿತ್ತು.
Key words: Kogilu layout, eviction case, 188 houses, identified, GBA







