ಇಂಜೆಕ್ಷನ್ ರಿಯಾಕ್ಷನ್ ಆಗಿ ಎರಡು ತಿಂಗಳ ಮಗು ಸಾವು..

ಕೊಡಗು,ಡಿ,19,2019(www.justkannada.in): ಇಂಜೆಕ್ಷನ್ ರಿಯಾಕ್ಷನ್ ಆಗಿ ಎರಡು ತಿಂಗಳ ಮಗು ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.

ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಭಾಗಮಂಡಲ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಭಾಗಮಂಡಲದ ತೇಜಸ್ವಿನಿ ಅಶೋಕ್ ದಂಪತಿಯ ಮಗು ಮೃತಪಟ್ಟಿದೆ.  ಎರಡು ತಿಂಗಳಿಗೆ ಕೊಡಬೇಕಾಗಿದ್ದ ಇಂಜೆಕ್ಷನ್ ಅನ್ನ ವೈದ್ಯರು ಕೊಟ್ಟಿದ್ದರು. ಇಂಜೆಕ್ಷನ್ ಕೊಟ್ಟ ತಕ್ಷಣವೇ  ಇಂಜೆಕ್ಷನ್ ರಿಯಾಕ್ಷನ್ ಆಗಿದೆ.

ಬಳಿಕ ಪೋಷಕರು ಮಗುವನ್ನ ಮಡಿಕೇರಿ ಜಿಲ್ಲಾಸ್ಪತ್ರೆಗೆ ಕರೆತಂದಿದ್ದರು. ಆದರೆ ಮಡಿಕೇರಿ ಆಸ್ಪತ್ರೆಯಲ್ಲಿ ಪರಿಶೀಲಿಸಿದಾಗ ಮಗು ಸತ್ತು ಒಂದು ಗಂಟೆಯಾಗಿದೆ ಎಂಧು ವೈದ್ಯರು ತಿಳಿಸಿದರು. ಈ ಕುರಿತು ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: kodagu-Two-month-old baby- death – injection- reaction.