ದುಬಾರೆ ಆನೆ ಕ್ಯಾಂಪ್ ನೋಡಲು ಹೋದಾಗ ದುರಂತ: ಇಬ್ಬರು ವಿದ್ಯಾರ್ಥಿಗಳು ಸಾವು….

ಕೊಡಗು,ಮಾ,4,2020(www.justkannada.in):  ಕಾವೇರಿಯ ನದಿಯಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿರುವ ಘಟನೆ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ದುಬಾರೆ ಆನೆ ಕ್ಯಾಂಪ್ ಬಳಿ ನಡೆದಿದೆ.

ಶ್ರೇಯಸ್(14)  ಮತ್ತು ಲೆನಿನ್(15) ಮೃತಪಟ್ಟ ವಿದ್ಯಾರ್ಥಿಗಳು.  ಮೃತ ವಿದ್ಯಾರ್ಥಿಗಳು ಗೋಣಿಕೊಪ್ಪ ಬಳಿಯ ಕಳತ್ಮಾಡುವಿನ ಲಯನ್ಸ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು ಎನ್ನಲಾಗಿದೆ. ಈ ನಡುವೆ ದುಬಾರೆ ಆನೆ ಕ್ಯಾಂಪ್ ನೋಡಲು ಬಂದಿದ್ದ ವಿದ್ಯಾರ್ಥಿಗಳು ನದಿಗೆ ಇಳಿದ ವೇಳೆ ಮುಳುಗಿ ಸಾವನ್ನಪ್ಪಿದ್ದಾರೆ.

ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ.

Key words: kodagu-dubare  elephant camp-Two students -death