ಮಾಜಿ ಸಚಿವ ಕೆ.ಎನ್ ರಾಜಣ್ಣ ಬಿಜೆಪಿಗೆ ಅರ್ಜಿ ಹಾಕಿದ್ದಾರೆ- ಹೊಸ ಬಾಂಬ್ ಸಿಡಿಸಿದ ಕಾಂಗ್ರೆಸ್ ಶಾಸಕ

ರಾಮನಗರ,ಸೆಪ್ಟಂಬರ್,2,2025 (www.justkannada.in): ಮಾಜಿ ಸಚಿವ ಕೆ.ಎನ್ ರಾಜಣ್ಣ ಬಿಜೆಪಿಗೆ ಅರ್ಜಿ  ಹಾಕಿದ್ದಾರೆ ಎಂದು ಮಾಗಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಹೆಚ್.ಸಿ ಬಾಲಕೃಷ್ಣ ಹೊಸಬಂಬ್ ಸಿಡಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಬಾಲಕೃಷ್ಣ, ಕೆಎನ್ ರಾಜಣ್ಣ ಬೇರೆ ಬೇರೆ ನಾಯಕರ ಜೊತೆ ಸಂಪರ್ಕದಲ್ಲಿದ್ದಾರೆ. ಈಗಾಗಲೇ ಒಂದು ಹೆಜ್ಜೆ ಹೊರಗಡೆ ಇಟ್ಟಿದ್ದಾರೆ. ರಾಜಣ್ಣರ ಬ್ರೈನ್ ಮ್ಯಾಪಿಂಗ್ ಮಾಡಿದರೆ  ಅದರ ಬಗ್ಗೆ ತಿಳಿಯುತ್ತೆ. ಯಾರ ಜೊತೆ ಸಂಪರ್ಕದಲ್ಲಿದ್ದಾರೆಂದು ತಿಳಿಯುತ್ತದೆ. ನಮ್ಮ ಸರ್ಕಾರ ಇದೆ ಎಂದು ಪಕ್ಷದಲ್ಲಿದ್ದಾರೆ ಇಲ್ಲಿದಿದ್ದರೇ ಇಷ್ಟೋತ್ತಿಗೆ ಪಕ್ಷ ಬಿಟ್ಟು ಹೋಗಿರುತ್ತಿದ್ದರು ಎಂದು ಹೇಳಿದ್ದಾರೆ.

ರಾಜಣ್ಣ ಅವರು ಮಾತಿನಿಂದ ಕೆಟ್ಟು ಹೋದರು. ಮಾತು ಮನೆ ಕೆಡಿಸಿತು ತೂತು ಒಲೆ ಕೆಡಿಸಿತು ಎನ್ನುವ ಹಾಗೆ . ಪಕ್ಷದ ವಿರುದ್ದ ಗೂಬೆ ಕುರಿಸಲು ಪಿತೂರಿ ನಡೆಯುತ್ತಿದೆ.   ನಮ್ಮ ಮೇಲೆ ನಾಯಕರ ಮೇಲೆ ಗೂಬೆ ಕೂರಿಸಬೇಕು ಎಂದು ಪಿತೂರಿ ನಡೆಯುತ್ತಿದೆ.  ನಮ್ಮ ಪಕ್ಷದ ನಾಯಕರ ಷಡ್ಯಂತ್ರ ಇಲ್ಲವೇ ಇಲ್ಲ ಎಂದು ಹೆಚ್ ಸಿ ಬಾಲಕೃಷ್ಣ ತಿಳಿಸಿದರು.

Key words: Former Minister, KN Rajanna, join, BJP, Congress, MLA