ಕಾಂಗ್ರೆಸ್ ನಲ್ಲಿ ಮಾತ್ರವಲ್ಲ ಬಿಜೆಪಿಯಲ್ಲೂ ನವೆಂಬರ್ ಕ್ರಾಂತಿ ಆಗುತ್ತೆ ನೋಡ್ತಾ ಇರಿ- ಕೆ.ಎನ್ ರಾಜಣ್ಣ

ತುಮಕೂರು,ಅಕ್ಟೋಬರ್,14,2025 (www.justkannada.in):  ನವೆಂಬರ್ ಕ್ರಾಂತಿ ಆಗುತ್ತೆ ನೋಡ್ತಾ ಇರಿ. ನೀವು ಬರೀ ಕಾಂಗ್ರೆಸ್ ನವರ ಬಗ್ಗೆ ಮಾತ್ರ ಮಾತಾಡುತ್ತಿದ್ದೀರಿ ಬಿಜೆಪಿಯಲ್ಲೂ ನವೆಂಬರ್ ಕ್ರಾಂತಿ ಆಗುತ್ತದೆ ಎಂದು ಮಾಜಿ ಸಚಿವ ಕೆ.ಎನ್ ರಾಜಣ್ಣ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೆ.ಎನ್ ರಾಜಣ್ಣ,   ಸಂಪುಟ ಪುನಾರಚನೆ ಈಗ ಅಪ್ರಸ್ತುತ ಬಿಹಾರ ಚುನಾವಣೆ ಬಳಿಕ ಸಂಪುಟ ವಿಸ್ತರಣೆಯಾಗುತ್ತದೆ.  ನಾನು ಸಿಹಿ ಕಹಿ ಎರಡನ್ನೂ ಸ್ವೀಕರಿಸುತ್ತೇನೆ ಎಂದರು.

ಕಾಂಗ್ರೆಸ್ ನಲ್ಲಿ ಮಾತ್ರವಲ್ಲ ಬಿಜೆಪಿಯಲ್ಲೂ ನವೆಂಬರ್ ಕ್ರಾಂತಿ ಆಗುತ್ತದೆ.  ಬಿವೈ ವಿಜಯೇಂದ್ರ ತೆಗೆಯಲು ದೊಡ್ಡ ಗುಂಪಿದೆ.  ವಿಜಯೇ ತೆಗೆದರೆ  ಬಿಎಸ್ ವೈ ಸುಮ್ಮನಿರಲ್ಲ ಬಿಜೆಪಿಗೆ ಬಿಎಸ್ ವೈ ಅನಿವಾರ್ಯ ಎಂದರು.

1972ರಲ್ಲಿ  ಡಿ.ದೇವರಾಜ ಅರಸು  ಅವರು ಶಾಸಕರಲ್ಲದಿದ್ದರೂ ಸಿಎಂ ಆಗಿದ್ದರು ಇದಕ್ಕೆಲ್ಲಾ ಶಾಸಕರ ಅಭಿಪ್ರಾಯವೇ ಕಾರಣವಾಗಿತ್ತು.  ಸಿದ್ದರಾಮಯ್ಯ ನಾಮನಿರ್ದೇಶನ ಸಿಎಂ ಆಲ್ಲ ಸಿದ್ದರಾಮಯ್ಯ ಒಬ್ಬ ಎಲೆಕ್ಟೆಡ್ ಮುಖ್ಯಮಂತ್ರಿ.  ಮುಂದೆ ಏನಾದರೂ ಸಿಎಂ ಬದಲಿಸಬೇಕಾದರೇ ವೀಕ್ಷಕರನ್ನ ಕಳುಹಿಸಿ ಎಐಸಿಸಿ ಅಭಿಪ್ರಾಯ ಸಂಗ್ರಹಿಸುತ್ತದೆ.  ಈ ಎಲ್ಲಾ ಗೊಂದಲಕ್ಕೆ ಹೈಕಮಾಂಡ್ ತೆರೆ ಎಳೆಯಬೇಕು ಎಂದು ಕೆ.ಎನ್ ರಾಜಣ್ಣ ತಿಳಿಸಿದರು.

Key words: November Revolution, Congress, BJP,  KN Rajanna