ಸಚಿವ ಸ್ಥಾನಕ್ಕೆ ಕೆ.ಎನ್ ರಾಜಣ್ಣ ರಾಜೀನಾಮೆ ಅಂಗೀಕಾರ

ಬೆಂಗಳೂರು,ಆಗಸ್ಟ್,11,2025 (www.justkannada.in):  ಹೈಕಮಾಂಡ್ ಸೂಚನೆ ಮೇರೆಗೆ  ಸಚಿವ ಸ್ಥಾನಕ್ಕೆ ಕೆ.ಎನ್ ರಾಜಣ್ಣ ರಾಜೀನಾಮೆ ನೀಡಿದ್ದು ರಾಜೀನಾಮೆಯನ್ನ ಸಿಎಂ ಸಿದ್ದರಾಮಯ್ಯ ಅಂಗೀಕರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿದ್ದ ಮತಗಳ್ಳತನ ಆರೋಪದ ವಿರುದ್ದ ಕೆ.ಎನ್ ರಾಜಣ್ಣ ಮಾತನಾಡಿದ್ದರು ಎನ್ನಲಾಗಿದೆ.  ಈ ಸಂಬಂಧ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಅವರಿಗೆ ದೂರು ನೀಡಲಾಗಿತ್ತು.

ಈ ಬಗ್ಗೆ ತೀವ್ರ ಅಸಮಾಧಾನಗೊಂಡ ಹೈಕಮಾಂಡ್ ರಾಜೀನಾಮೆ ನೀಡುವಂತೆ ಸಚಿವ ಕೆ.ಎನ್ ರಾಜಣ್ಣಗೆ ಸೂಚನೆ ನೀಡಿತ್ತು ಎನ್ನಲಾಗಿದೆ.  ಇದೀಗ ಕೆ.ಎನ್ ರಾಜಣ್ಣ ರಾಜೀನಾಮೆಯನ್ನ  ಸಿಎಂ ಸಿದ್ದರಾಮಯ್ಯ ಅಂಗೀಕರಿಸಿದ್ದು ರಾಜ್ಯಪಾಲರಿಗೆ ಅಂಗೀಕಾರದ ಪತ್ರ ರವಾನೆ ಮಾಡಲಿದ್ದಾರೆ.

Key words: Accept, KN Rajanna,  resignation, minister post