ಕೆಎಂಎಫ್ ನಿಂದ ಗ್ರಾಹಕರಿಗೆ ಗುಡ್ ನ್ಯೂಸ್: ಹಾಲಿನ ಉತ್ಪನ್ನಗಳ ಬೆಲೆ ಇಳಿಕೆ

ಬೆಂಗಳೂರು, ಸೆಪ್ಟಂಬರ್,20,2025 (www.justkannada.in): ಗ್ರಾಹಕರಿಗೆ ಕೆಎಂಎಫ್ ಸಿಹಿಸುದ್ದಿ ನೀಡಿದ್ದು ಹಾಲಿನ ಉತ್ಪನ್ನಗಳ ಬೆಲೆ ಇಳಿಕೆ ಮಾಡಿದೆ.

ಕೆಎಂಎಫ್  ಪನ್ನೀರಿಗೆ ಕೆಜಿಗೆ 17 ರೂ ಇಳಿಕೆಯಾಗಿದೆ. ಗುಡ್ ಲೈಫ್ ಹಾಲಿನ ದರ 1 ಲೀಟರ್ ಗೆ 2 ರೂ ಇಳಿಕೆಯಾಗಲಿದೆ. ಆದರೆ ಹಾಲು ಮತ್ತು ಮೊಸರಿನ ದರ ಯಥಾಸ್ಥಿತಿ ಮುಂದುವರೆಯಲಿದೆ.

1000 ಎಂಎಲ್ ತುಪ್ಪ ಹಳೆಯದರ 650 ಇದ್ದರೆ, ಹೊಸದರ 610 ರೂಪಾಯಿಗೆ ಇಳಿಕೆಯಾದರೆ 500 ಮಿಲಿ ಲೀಟರ್ ಬೆಣ್ಣೆ ಹಳೆಯ ದರ 306 ಹೊಸದರ 286 ರೂಪಾಯಿ ಆಗಲಿದೆ. ಇನ್ನು 1ಕೆಜಿ ಪನೀರ್ ಹಳೆಯ ದರ 425 ಇದ್ದರೆ, ಹೊಸ ದರ 408 ರೂಪಾಯಿ ಆಗಲಿದೆ.

ಒಂದು ಲೀಟರ್ ಗುಡ್ ಲೈಫ್ ಹಾಲು, ಹಳೆಯ ದರೆ ರೂ.70 ಇದ್ದರೆ, ಹೊಸದರ 68 ರೂಪಾಯಿ ಇದೆ. ಚೀಸ್ ಒಂದಕ್ಕೆ ಹಳೆಯದರ 480 ಇದ್ದರೆ ಹೊಸದರ 450 ರೂಪಾಯಿಗೆ ಇಳಿಕೆ ಮಾಡಲಾಗಿದೆ. ಸಂಸ್ಕರಿಸಿದ ಚೀಸ್ ಹಳೆಯದರ 530 ಇದ್ದರೆ ಹೊಸದರ 497ಕ್ಕೆ ಇಳಿಕೆ ಮಾಡಲಾಗಿದೆ. ಸೆಪ್ಟಂಬರ್ 22 ರಿಂದ ಈ ಪರಿಷ್ಕೃತ ದರ ಜಾರಿಗೆ ಬರಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

Key words: KMF, Prices, milk products, reduced