Friday, August 14, 2026

BDA Apartments

Home Front Page ಕೆಎಲ್ ರಾಹುಲ್-ಜಿಮ್ಮಿ ನಿಶಾನ್ ‘ಟ್ವಿಟರ್’ ಕಾದಾಟ

ಕೆಎಲ್ ರಾಹುಲ್-ಜಿಮ್ಮಿ ನಿಶಾನ್ ‘ಟ್ವಿಟರ್’ ಕಾದಾಟ

ಬೇ ಓವಲ್, ಫೆಬ್ರವರಿ 13, 2020 (www.justkannada.in): ಟೀಂ ಇಂಡಿಯಾದ ಕೆಎಲ್ ರಾಹುಲ್ ಮತ್ತು ನ್ಯೂಜಿಲ್ಯಾಂಡ್ ನ ಜಿಮ್ಮಿ ನಿಶಾನ್ ಟ್ವಿಟ್ಟರ್ ನಲ್ಲಿ ಕಾದಾಟ ಶುರು ಮಾಡಿದ್ದಾರೆ.

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಏಕದಿನ ಪಂದ್ಯದ ವೇಳೆ ಮೈದಾನದಲ್ಲಿ ರನ್ ಕದಿಯುವಾಗ ಅಡ್ಡ ಬಂದ ವಿಚಾರಕ್ಕೆ ಪರಸ್ಪರ ಕಿತ್ತಾಡಿಕೊಂಡಿದ್ದ ಈ ಇಬ್ಬರ ಜಗಳ ಟ್ವಿಟ್ಟರ್ ನಲ್ಲಿ ಮುಂದುವರಿದಿದೆ.

ಐಸಿಸಿ ಇವರಿಬ್ಬರ ಕಾದಾಟ ಫೋಟೋ ಹಾಕಿ ಹಾಸ್ಯದ ದಾಟಿಯಲ್ಲಿ ಸಂದೇಶ ಬರೆದಿತ್ತು. ಇದಕ್ಕೆ ನೀಶಾಮ್ ಮಕ್ಕಳು ಆಡುವ ಸ್ಟೋನ್ ಪೇಪರ್ ಸೀಸರ್ ಆಟ ಎಂದು ಪ್ರತಿಕ್ರಿಯಿಸಿ ಹಾಸ್ಯ ಮಾಡಿದ್ದರು.

ಇದೀಗ ಕೆಎಲ್ ರಾಹುಲ್ ಕೂಡಾ ಇದಕ್ಕೆ ತಿರುಗೇಟು ಕೊಟ್ಟಿದ್ದು, ‘ಏಪ್ರಿಲ್ ನಲ್ಲಿ ಎಲ್ಲವೂ ಸೆಟ್ಲ್ ಮಾಡೋಣ. ಸ್ವಲ್ಪ ದಿನ ಕಾದಿರು’ ಎಂದು ಕಾಮೆಂಟ್ ಮಾಡಿದ್ದಾರೆ.