ಬೆಂಗಳೂರು,ಅಕ್ಟೋಬರ್,15,2025 (www.justkannada.in): ಬೆಂಗಳೂರಿನಲ್ಲಿ ರಸ್ತೆಗುಂಡಿಗಳ ಬಗ್ಗೆ ಕಾಂಗ್ರೆಸ್ ಸರ್ಕಾರದ ವಿರುದ್ದ ಅಸಮಾಧಾನ ಹೊರ ಹಾಕಿದ್ದ ಉದ್ಯಮಿ ಕಿರಣ್ ಮಜುಂದಾರ್ ಷಾ ಇದೀಗ ಹಿಂದಿನ ಬಿಜೆಪಿ ಸರ್ಕಾರಕ್ಕೂ ತಿವಿದಿದ್ದಾರೆ.
ಈ ಕುರಿತು ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿರುವ ಕಿರಣ್ ಮಜುಂದಾರ್ ಷಾ, ಹಿಂದಿನ ಸರ್ಕಾರಗಳು ಸಕಾಲದಲ್ಲಿ ಕ್ರಮ ಕೈಗೊಳ್ಳದ ಕಾರಣ ನಾವು ಈ ಸಂಕಷ್ಟ ಪರಿಸ್ಥಿತಿಯಲ್ಲಿದ್ದೇವೆ. ದಶಕಗಳಿಂದ ಹದಗೆಡುತ್ತಿರುವ ಮೂಲಸೌರ್ಯ ಹಾಗೂ ಕಸ ನಿರ್ವಹಣೆ ಸರಿಪಡಿಸಲು ಈ ಸರ್ಕಾರಕ್ಕೆ ಈಗ ಅವಕಾಶವಿದೆ.
ನಾನು ಬಯಸುತ್ತಿರುವುದು ಕಸ ತೆರವು ರಸ್ತೆ ನಿರ್ಮಾಣ. ಇದನ್ನ ನ ಗ್ರೇಟರ್ ಬೆಂಳೂರು ಮಾಡಬೇಕಿದೆ. ಇಲ್ಲಿ ಸರ್ಕಾರ ನಾಗರಿಕರು ಒಂದೇ ಪುಟದಲ್ಲಿ ವರದಿ ಮಾಡನೇಕು ಎಂದು ಕಿರಣ್ ಮಜುಂದಾರ್ ಶಾ ತಿಳಿಸಿದ್ದಾರೆ.
Key words: Road, pothole, problem, Businessman, Kiran Majumdar Shah