ಕೋವಿಡ್ ವ್ಯಾಕ್ಸಿನ್ ಗಾಗಿ ಮೈಸೂರಿನಲ್ಲಿ ಕಿಲೋ ಮೀಟರ್’ಗಟ್ಟಲೆ ಕ್ಯೂ !

ಮೈಸೂರು, ಜುಲೈ 24, 2021 (www.justkannada.in): ಕೋವಿಡ್ ವ್ಯಾಕ್ಸಿನ್ ಗಾಗಿ ಮೈಸೂರಿನಲ್ಲಿ‌‌ ಕಿಲೋ ಮೀ‌ಟರ್ ಗಟ್ಟಲೆ ಕ್ಯೂ ಕಂಡು ಬಂದಿದೆ.

ಮೈಸೂರಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ವ್ಯಾಕ್ಸಿನ್ ಗಾಗಿ‌ ಭಾರಿ ಕ್ಯೂ ಕಂಡುಬಂದಿದೆ. ಕುವೆಂಪುನಗರದಲ್ಲಿರುವ ಪಬ್ಲಿಕ್ ಸ್ಕೂಲ್ ನಲ್ಲಿ ಎರಡನೇ ಡೋಸ್ ಗಾಗಿ‌ ಜನ ಮುಗಿಬಿದ್ದಿದ್ದಾರೆ.

ಎರಡು ವಾರಗಳಿಂದ ಮೈಸೂರಿನಲ್ಲಿ‌ ಸ್ಥಗಿತಗೊಂಡಿದ್ದ ವ್ಯಾಕ್ಸಿನ್ ಅಭಿಯಾನ. ಇದೀಗ ಮತ್ತೆ  ಪುನರ್ ಆರಂಭವಾದ ಕಾರಣ ವ್ಯಾಕ್ಸಿನ್ ಪಡೆಯಲು ಸಾರ್ವಜನಿಕರು ಮುಂದಾಗಿದ್ದಾರೆ

ಸದ್ಯದಲ್ಲೇ ಕಾಲೇಜುಗಳು ಆರಂಭ ಹಿನ್ನಲೆಯಲ್ಲಿ ಲಸಿಕೆ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಕೂಡ ಮುಗಿಬಿದ್ದಿದ್ದಾರೆ. ಮೊದಲ ಡೋಸ್ ಪಡೆದು ಕಾಲೇಜಿಗೆ ಹೋಗಲು ವಿದ್ಯಾರ್ಥಿಗಳು ಸಿದ್ದರಾಗಿದ್ದಾರೆ. ಜನರನ್ನು ನಿಯಂತ್ರಿಸಲು ಪೋಲಿಸರು ಹರಸಾಹಸ ಪಡುತ್ತಿದ್ದಾರೆ. ಲಸಿಕೆ ಹಾಕಿಸಿಕೊಳ್ಳುವ ಭರದಲ್ಲಿ ಸಾಮಾಜಿಕ ಅಂತರ ಮಾಯವಾಗಿದೆ.