ಗುಂಡಿಕ್ಕಿ ಕಾರ್ಪೋರೇಟರ್ ಪತಿ ಹತ್ಯೆಗೈದ ದುಷ್ಕರ್ಮಿಗಳು.

ವಿಜಯಪುರ,ಮೇ,5,2023(www.justkannada.in):  ವಿಜಯಪುರದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿದ್ದು, ಹಾಡಹಗಲೇ ಕಾರ್ಪೋರೇಟರ್ ಪತಿಯನ್ನ ದುಷ್ಕರ್ಮಿಗಳು ಹತ್ಯೆಗೈದು ಪರಾರಿಯಾಗಿರುವ ಘಟನೆ ನಡೆದಿದೆ.

ನಗರದ ಚಾಂದಪುರ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ವಾರ್ಡ್ ನಂ.19ರ ಪಕ್ಷೇತರ ಸದಸ್ಯೆ ನಿಶಾತ್ ಪತಿ ಹೈದರ್ ಅಲಿ ನದಾಫ್ ಹತ್ಯೆಯಾದವರು. ಹೈದರ್ ಅಲಿ ನದಾಫ್ ರೌಡಿಶೀಟರ್ ಎನ್ನಲಾಗಿದ್ದು, ಇಂದು ದುಷ್ಕರ್ಮಿಗಳು ಗುಂಡು ಹಾರಿಸಿ ಹೈದರ್ ಆಲಿ ನದಾಫ್ ಹತ್ಯೆಗೈದು ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಘಟನಾಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,  ಜಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Key words: killed –firing-corporator’s- husband-vijaypur