ಅಂಗನವಾಡಿಗೆ ಹೋಗಿದ್ದ ಸಹೋದರನ ಮಗುವನ್ನೇ ಹತ್ಯೆಗೈದ ಪಾಪಿ

ಬಾಗಲಕೋಟೆ,ಜುಲೈ,22,2025 (www.justkannada.in): ಅಂಗನವಾಡಿಗೆ ಹೋಗಿದ್ದ ಸಹೋದರನ ಮಗುವನ್ನ ವ್ಯಕ್ತಿಯೊಬ್ಬ ಕೊಲೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಬೆನಕನವಾರಿ ಗ್ರಾಮದಲ್ಲಿ  ನಡೆದಿದೆ.

ಮಾರುತಿ ವಾಲಿಕರ್ ಎಂಬುವವರ 3 ವರ್ಷದ  ಮಗುವನ್ನು ಇವರ ಸಹೋದರನೇ ಆದ ಭೀಮಪ್ಪ ವಾಲೀಕಾರ ಕೊಲೆ ಮಾಡಿದ್ದಾನೆ.  ಮಗು ಅಂಗನವಾಡಿಗೆ ತೆರಳಿತ್ತು. ಈ ವೇಳೆ   ಭೀಮಪ್ಪ ವಾಲೀಕಾರ ಮಗುವನ್ನ ಅಂಗನವಾಡಿ ಹಿಂಭಾಗ ಚಾಕುವಿನಿಂದ ಕತ್ತು ಕೊಯ್ದು ಹತ್ಯೆಗೈದಿದ್ದಾನೆ ಎನ್ನಲಾಗಿದೆ.

ಸಹೋದರನ ಮೇಲಿನ ದ್ವೇಷದಿಂದ ಭೀಮಪ್ಪ ವಾಲೀಕಾರ ಈ ಕೃತ್ಯವೆಸಗಿದ್ದಾನೆ ಎನ್ನಲಾಗಿದೆ.  ಈ ಕುರಿತು ಅಮಿನಗಡ ಪೊಲೀಸ್ ಠಾಣೆಯಲ್ಲಿ ಘಟನೆ ಕುರಿತಂತೆ ಪ್ರಕರಣ ದಾಖಲಾಗಿದೆ.vtu

Key words: killed, brother, son, Anganwadi, Bagalkote