ಥಿಯೇಟರ್’ಗಳಲ್ಲಿ’ವಿಕ್ರಾಂತ್ ರೋಣ’ ಹವಾ ! ಮೊದಲ ದಿನವೇ ಕೆಜಿಎಫ್-2 ದಾಖಲೆ ಮುರಿದ ಕಿಚ್ಚ?

ಬೆಂಗಳೂರು, ಜುಲೈ 28, 2022 (www.justkannada.in): ಥಿಯೇಟರ್‌ಗಳಲ್ಲಿ ‘ವಿಕ್ರಾಂತ್ ರೋಣ’ ಚಿತ್ರದಲ್ಲಿ ಕಿಚ್ಚ ಸುದೀಪ್ ಹವಾ ಶುರುವಾಗಿದೆ.

ನಿನ್ನೆ ರಾತ್ರಿಯಿಂದಲೇ ದುಬೈ ಸೇರಿದಂತೆ ವಿದೇಶಗಳಲ್ಲಿ ಪ್ರೀಮಿಯರ್‌ ಶೋಗಳು ಪ್ರಾರಂಭವಾಗಿವೆ. ಬೆಳಗ್ಗೆ 6 ಗಂಟೆಯಿಂದಲೇ ರಾಜ್ಯಾದ್ಯಂತ ಸಾಕಷ್ಟು ಥಿಯೇಟರ್‌ಗಳಲ್ಲಿ ಪ್ರೇಕ್ಷಕರು ಸಿನಿಮಾ ಕಣ್ತುಂಬಿಕೊಳ್ಳುತ್ತಿದ್ದಾರೆ.

ಅಂದಹಾಗೆ  ಬಿಡುಗಡೆಯ ದಿನವೇ ‘ಕೆಜಿಎಫ್-2’ ಚಿತ್ರದ ಅದೊಂದು ದಾಖಲೆಯನ್ನು ‘ರೋಣ’ ಮುರಿದಿದೆ ಎನ್ನಲಾಗುತ್ತಿದೆ.

ಫಸ್ಟ್ ಡೇ ಫಸ್ಟ್ ಶೋ ನೋಡೋಕೆ ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಮಾಗಡಿ ರಸ್ತೆಯ ವೀರೇಶ್, ಎಂ. ಜಿ ರಸ್ತೆಯ ಶಂಕರ್‌ನಾಗ್‌ ಥಿಯೇಟರ್‌ ಗಳಲ್ಲಿ ಭರ್ಜರಿ ಪ್ರದರ್ಶನ ನಡೆಯುತ್ತಿದೆ.

ಮೊದಲ ದಿನ ಅಂದಾಜು 2500 ಸ್ಕ್ರೀನ್‌ಗಳಲ್ಲಿ 9500ಕ್ಕೂ ಅಧಿಕ ಶೋಗಳು ಕನ್ಫರ್ಮ್ ಆಗಿದೆ. ಮೊದಲ ಬಾರಿಗೆ ಕಿಚ್ಚ ಸುದೀಪ್ ನಟನೆಯ ಸಿನಿಮಾ ಇಷ್ಟು ದೊಡ್ಡಮಟ್ಟದಲ್ಲಿ ರಿಲೀಸ್ ಆಗುತ್ತಿದೆ.