ಬಿ.ಎಲ್ ವೇಣು ಅವರಿಗೆ ‘ಕೆಂಧೂಳಿ ರಾಜ್ಯೋತ್ಸವ ಪ್ರಶಸ್ತಿ’ ಪ್ರದಾನ

ಚಿತ್ರದುರ್ಗ,ನವೆಂಬರ್,16,2025 (www.justkannada.in): ಜನಪ್ರಿಯ ಕಥೆಗಳಿಗೆ ಚಲನಚಿತ್ರಗಳ ಸಂಭಾಷಣೆಯಲ್ಲಿ ಸಾಹಿತ್ಯದ ಸ್ಪರ್ಶ ಮೂಡಿಸುವ ಮೂಲಕ ಹೊಸ ಅಧ್ಯಾಯವನ್ನು ಬಿ.ಎಲ್.ವೇಣು ಸೃಷ್ಟಿಸಿದರು ಎಂದು ಚಿಂತಕ ಹಾಗೂ ಸಾಹಿತಿ ಡಾ.ಬಂಜಗೆರೆ ಜಯಪ್ರಕಾಶ್  ಅಭಿಪ್ರಾಯಪಟ್ಟರು.

ಕೆಂಧೂಳಿ ವಾರಪತ್ರಿಕೆ ಬಳಗದಿಂದ ಕೊಡಮಾಡುವ ಕೆಂಧೂಳಿ ರಾಜ್ಯೋತ್ಸವ ಪ್ರಶಸ್ತಿಯನ್ನು ಬಿ.ಎಲ್ ವೇಣು ಅವರಿಗೆ ಪ್ರದಾನ ಮಾಡಿ ಅವರು ಮಾತನಾಡಿದ ಡಾ.ಬಂಜಗೆರೆ ಜಯಪ್ರಕಾಶ್ , ಬಿ.ಎಲ್ ವೇಣು ಅವರು ಜನಪ್ರಿಯ ಕಥೆ, ಕಾದಂಬರಿಕಾರರು ಸಹಜವಾಗಿಯೇ ಚಲನಚಿತ್ರಗಳ ಸಂಭಾಷಣೆಯ ಅವಕಾಶ ಬಂದಾಗ ಅದಕ್ಕೊಂದು ಸಾಹಿತ್ಯದ ಸ್ಪರ್ಶನೀಡಿ ಹೊಸ ಅರ್ಥ ಸೃಷ್ಟಿಸಿದರು ಎಂದು ಅವರು ಹೇಳಿದರು.

ಸಮಾಜದ ದೊಡ್ಡ ಸಮಸ್ಯೆಯಾಗಿದ್ದ ಬೆತ್ತಲೆ ಸೇವೆಯಂತ ಸಾಮಾಜಿಕ ಸಮಸ್ಯೆಯ ಕುರಿತು ಬರೆದ ಕಾದಂಬರಿ ಲಕ್ಷಾಂತರ ಜನರಿಗೆ ಅದರ  ಅರಿವು ಮೂಡಿಸುವ ಮೂಲಕ ಅನಿಷ್ಟ ಪದ್ದತಿಯನ್ನು ಹೋಗಲಾಡಿಸಲು ಕಾರಣವಾಯಿತು. ಅಲ್ಲದೆ ಅದು ಚಲನಚಿತ್ರವಾಗುವ ಮೂಲಕ ಮತ್ತಷ್ಟು ಜನರಿಗೆ ಅರಿವು ಮೂಡಿಸುವ ಕೆಲಸ ಮಾಡಿಸಿತು ಎಂದು ಅಭಿಪ್ರಾಯಪಟ್ಟರು.

ಕೆಂಧೂಳಿ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.ಬಿ.ಎಲ್.ವೇಣು ಅವರು,  ಪ್ರಶಸ್ತಿಗಳೆಲ್ಲವೂ ಒಂದೇ. ಯಾವುದು ದೊಡ್ಡವೂ ಅಲ್ಲ ಯಾವುದು ಸಣ್ಣದು ಅಲ್ಲ. ಅದಕ್ಕೊಂದು ಗೌರವವಿದೆ. ಪ್ರಶಸ್ತಿ ಸ್ವೀಕರಿಸುವವರಿಗೆ ಜವಾಬ್ದಾರಿಯೂ ಹೆಚ್ಚಾಗುತ್ತದೆ ಎಂದ ಅವರು ನನಗೆ ಬಹುತೇಕ ಎಲ್ಲಾ ಪ್ರಶಸ್ತಿಗಳು ಬಂದಿವೆ. ಆದರೆ ಕೇಂದ್ರ ಆಕಾಡೆಮಿ ಪ್ರಶಸ್ತಿ ಮಾತ್ರ ಬಂದಿಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಸಮಾರಂಭದಲ್ಲಿ ಹಿರಿಯ ಪತ್ರಕರ್ತ ಚಳ್ಳಕೆರೆ ಯರ್ರಿಸ್ವಾಮಿ, ಕೆಂಧೂಳಿ ಪತ್ರಿಕೆ ಸಂಪಾಕ ತುರುವನೂರು ಮಂಜುನಾಥ, ಪತ್ರಕರ್ತ ಎಚ್.ಲಕ್ಷ್ಮಣ್, ಹರೀಶ್ ಬೇದ್ರೆ ಇದ್ದರು.

Key words: B.L. Venu, Kendhuli Rajyotsava Award, Dr. Banjagere Jayaprakash