ಸ್ಥಳೀಯ ಭಾಷೆ ಬಾರದ ಬ್ಯಾಂಕ್ ಅಧಿಕಾರಿಗಳನ್ನು ಗ್ರಾಹಕರ ಜತೆಗಿನ ನೇರ ವ್ಯವಹಾರದಿಂದ ದೂರವಿಡಿ: ನಿರ್ಮಲಾ ಸೀತಾರಾಮನ್

ಬೆಂಗಳೂರು, ಸೆಪ್ಟೆಂಬರ್ 18, 2022 (www.justkannada.in):ಕರ್ನಾಟಕದ ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ ಕನ್ನಡವನ್ನು ನಿರ್ಲಕ್ಷಿಸ ಲಾಗುತ್ತದೆ ಎಂಬ ಆರೋಪದ ಬೆನ್ನಲ್ಲೇ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೊಸ ಆದೇಶ ನೀಡಿದ್ದಾರೆ.

ಭಾರತೀಯ ಬ್ಯಾಂಕ್‌ಗಳ ಒಕ್ಕೂಟದ ಸಭೆಯಲ್ಲಿ ಸ್ಥಳೀಯ ಭಾಷೆಗಳನ್ನು ತಿಳಿಯದೇ ಇರುವವರು ಬ್ಯಾಂಕ್‌ನ ಶಾಖೆಗಳಲ್ಲಿ ಉದ್ಯೋಗದಲ್ಲಿ ಇರಲು ಸಾಧ್ಯವಿಲ್ಲ. ಜತೆಗೆ ಅಧಿಕಾರಿಗಳು ನಿಗದಿತ ಭಾಷೆ ಯಲ್ಲಿಯೇ ಮಾತನಾಡಬೇಕು ಎಂದು ಸೂಚನೆ ನೀಡಿದ್ದಾರೆ.

ಒಂದು ವೇಳೆ ನಿಗದಿತ ಬ್ಯಾಂಕ್‌ ಶಾಖೆಗಳಲ್ಲಿ ಸ್ಥಳೀಯ ಭಾಷೆಗಳಲ್ಲಿ ವ್ಯವಹರಿಸಲು ಸಾಧ್ಯವಾಗದಿರುವ ಅಧಿ ಕಾರಿಯನ್ನು ಗ್ರಾಹಕರ ಜತೆಗಿನ ನೇರ ವ್ಯವಹಾರದಿಂದ ದೂರವಿಡಬೇಕು ಎಂದೂ ಸೂಚಿಸಿದ್ದಾರೆ.

ಸ್ಥಳೀಯ ಭಾಷೆ ಅರಿಯದ ಅಧಿಕಾರಿಗಳನ್ನು ಆ ಪ್ರದೇಶಕ್ಕೆ ಭಾರತೀಯ ಬ್ಯಾಂಕ್‌ ಅಧಿಕಾರಿಗಳ ಒಕ್ಕೂಟ ಹೇಗೆ ವರ್ಗಾಯಿಸುತ್ತದೆ ಎಂಬುದೇ ಅರ್ಥವಾಗದು ಎಂದು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.