MYSORE NEWS :ಸತತ ಹತ್ತು ಗಂಟೆ KDP ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ.

I have worked to uphold the constitutional values ​​during my seven and a half years as Chief Minister. Officers should also be secular as per the constitution. They should not act in favor of any party, caste or religion and should be professional. Eliminating inequality is everyone's moral responsibility. Every officer and staff should perform their duties impartially. Being socially oriented and fulfilling the aspirations of the constitution is our and your goal

 

ಮೈಸೂರು, ಅ.೧೦,೨೦೨೫: ಬೆಳಗ್ಗೆ 11:30ಯಿಂದ ರಾತ್ರಿ 9:30 ವರೆಗೂ ಮ್ಯಾರಥಾನ್ ಸಭೆ. ಬಹುತೇಕ ಇಲಾಖೆಗಳ ಪ್ರಗತಿ ಪರಿಶೀಲನೆ ಬಳಿಕ ಅಧಿಕಾರಿಗಳನ್ನು ಉದ್ದೇಶಿಸಿ ಸಿಎಂ‌ ಆಡಿದ ಮಾತುಗಳು…

ಏಳೂವರೆ ವರ್ಷ ನಾನು ಮುಖ್ಯಮಂತ್ರಿಯಾಗಿ ಈ ಅವಧಿಯಲ್ಲಿ ಸಂವಿಧಾನ ಮೌಲ್ಯಗಳನ್ನು ಎತ್ತಿ ಹಿಡಿಯಲು ಕೆಲಸ ಮಾಡಿದ್ದೇನೆ. ಅಧಿಕಾರಿಗಳೂ ಸಂವಿಧಾನಬದ್ದವಾಗಿ ಜಾತ್ಯತೀತರಾಗಿರಬೇಕು. ಯಾವುದೇ ಪಕ್ಷದ ಪರವಾಗಿ, ಜಾತಿ-ಧರ್ಮದ ಪರವಾಗಿ ವರ್ತಿಸದೇ ವೃತ್ತಿಪರವಾಗಿ ಇರಬೇಕು . ಅಸಮಾನತೆ ಹೋಗಲಾಡಿಸುವುದು ಪ್ರತಿಯೊಬ್ಬರ ನೈತಿಕ ಜವಾಬ್ದಾರಿ. ಪ್ರತಿಯೊಬ್ಬ ಅಧಿಕಾರಿ, ಸಿಬ್ಬಂದಿ ನಿಸ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸಬೇಕು . ಸಮಾಜಮುಖಿಯಾಗಿರುವುದು, ಸಂವಿಧಾನದ ಆಶಯಗಳನ್ನು ಈಡೇರಿಸುವುದು ನಮ್ಮ-ನಿಮ್ಮ ಗುರಿ.

ಅಸಮಾನತೆ ತೊಲಗದೆ ಸಮ ಸಮಾಜದ ಸೃಷ್ಟಿ ಸಾಧ್ಯವಿಲ್ಲ

ನಮ್ಮ ಜಿಲ್ಲೆಯಲ್ಲಿ ಕೆಲಸ ಮಾಡುವ ಅಧಿಕಾರಿಗಳು ಪ್ರತಿಯೊಬ್ಬರೂ ಸಮಾಜಮುಖಿಯಾಗಿ ಕೆಲಸ ಮಾಡಬೇಕು. ಬಹಳ ಮಂದಿಗೆ ಅಧಿಕಾರ ಕೇಂದ್ರಗಳು ಅರ್ಥ ಆಗುವುದಿಲ್ಲ. ಗ್ರಾಈಣ ಭಾಗದಲ್ಲಿ ಬದುಕು ಕಳೆದುಕೊಂಡವರು ಜೀವನಕ್ಕಾಗಿ ನಗರಕ್ಕೆ ಬರುತ್ತಾರೆ. ನಮ್ಮಲ್ಲಿರುವ ಶೇ90 ಕ್ಕಿಂತ ಹೆಚ್ಚು ಅಧಿಕಾರಿಗಳು ಗ್ರಾಮೀಣ ಭಾಗದಿಂದ ಬಂದವರು. ಗ್ರಾಮೀಣ ಪ್ರದೇಶ ಪ್ರಗತಿ ಆಗದೆ ದೇಶದ ಪ್ರಗತಿ ಸಾಧ್ಯವಿಲ್ಲ. ಗ್ರಾಮೀಣ ಭಾಗದಿಂದ ಬಂದ ಅಧಿಕಾರಿ ಮತ್ತು ಸಿಬ್ಬಂದಿ ಸ್ಪಂದಿಸದಿದ್ದರೆ ಜನೋದ್ಧಾರ ಸಾಧ್ಯವಿಲ್ಲ. ಆದ್ದರಿಂದ ಅಮಾಯಕ ಜನರನ್ನು ಅಲೆದಾಡಿಸಬೇಡಿ. ಜನರ ಸಮಸ್ಯೆ ಕೇಳಿಸಿಕೊಂಡು ಸಮಸ್ಯೆ ಬಗೆಹರಿಸಿ

ಅಧಿಕಾರಿಗಳು ಕಚೇರಿಯಲ್ಲೇ ಕೂರದೇ ಸ್ಥಳ ಸಮೀಕ್ಷೆ ಮಾಡಬೇಕು

ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಹೋದಾಗ ಅಪರಾಧ ಪತ್ತೆ ಹೆಚ್ಚು ಪರಿಣಾಮಕಾರಿಯಾಗಿ ಆಗುತ್ತದೆ. ಪೊಲೀಸ್ ಅಧಿಕಾರಿಗಳಿಗೆ ಗೊತ್ತಿಲ್ಲದೆ ಯಾವುದೇ ಸಂಘಟಿತ ಅಪರಾಧಗಳು ನಡೆಯಲು ಸಾಧ್ಯವಿಲ್ಲ

ಮಂಗಳೂರಿನಲ್ಲಿ ಪೊಲೀಸ್ ಕಮಿಷನರ್ ಮತ್ತು ಒಬ್ಬರು ಜಿಲ್ಲಾ ರಕ್ಷಣಾಧಿಕಾರಿಯನ್ನು ಬದಲಾಯಿಸಿದ ಮೇಲೆ ಜಿಲ್ಲೆಯ ಪರಿಸ್ಥಿತಿ ಸುಧಾರಿಸಿತು. ಹೊಸದಾಗಿ ಬಂದ ಇಬ್ಬರು ಅಧಿಕಾರಿಗಳಿಗೆ ಸಾಧ್ಯವಾಗಿದ್ದು ಉಳಿದ ಅಧಿಕಾರಿಗಳಿಂದಲೂ ಸಾಧ್ಯವಿದೆ. ಇದಕ್ಕೆ ಅಧಿಕಾರಿಗಳು ವೃತ್ತಿಪರವಾಗಿ, ಸಂವಿಧಾನಬದ್ದವಾಗಿ ಇದ್ದರೆ ಸಾಕು ಎಂದು ಕಿವಿಮಾತು ಹೇಳಿದರು.

key words: Chief Minister Siddaramaiah, KDP meeting, ten consecutive hours, Mysore

SUMMARY:

Chief Minister Siddaramaiah held a KDP meeting for ten consecutive hours.

Marathon meeting from 11:30 am to 9:30 pm. CM’s words to the officers after reviewing the progress of most departments…

I have worked to uphold the constitutional values ​​during my seven and a half years as Chief Minister. Officers should also be secular as per the constitution. They should not act in favor of any party, caste or religion and should be professional. Eliminating inequality is everyone’s moral responsibility. Every officer and staff should perform their duties impartially. Being socially oriented and fulfilling the aspirations of the constitution is our and your goal.