ವಿಸ್ತಾರಿಕ್ ರೋಬೋಟಿಕ್ಸ್ ಪ್ರೈವೇಟ್ ಲಿಮಿಟೆಡ್ ನ ಹೊಸ ಆವಿಷ್ಕಾರ ‘KB1’ ಲೋಕಾರ್ಪಣೆ

ಮೈಸೂರು,ಮೇ,5,2025 (www.justkannada.in): ನಗರದ  ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ವಿಸ್ತಾರಿಕ್ ರೋಬೋಟಿಕ್ಸ್ ಪ್ರೈವೇಟ್ ಲಿಮಿಟೆಡ್ ಹೊಸ ಆವಿಷ್ಕಾರ KB1 ಲೋಕಾರ್ಪಣೆಯನ್ನು ಮೈಸೂರು ವಿಶ್ವವಿದ್ಯಾನಿಲಯದ ಮಾಜಿ ಕುಲಪತಿ ಹೇಮಂತ್ ಕುಮಾರ್ ನೆರವೇರಿಸಿದರು.

ಸುದ್ದಿಗೋಷ್ಠಿಯಲ್ಲಿ ಸಹಸಂಸ್ಥಾಪಕಿ  ಮತ್ತು ಸಿಇಒ,  ಮಂಗಳಮುಖಿ  ಡಾ.ಅನಿತಾ ಪ್ರಸಾದ್ ಅವರು ಮಾತನಾಡಿ  ಜಯಶ್ರೀ ಭಾರತದ ಮೊದಲ  ರೋಬೋಟಿಕ್ ನೀ ಓರ್ಥೋಸಿನ್ ಬಿಡುಗಡೆ ಇದು ಒಂದು ಉತ್ಪನ್ನ ಮಾತ್ರವಲ್ಲ, ಇದು ಒಂದು ಮಾನವೀಯ ಐತಿಹಾಸಿಕ ಪ್ರಯತ್ನ ತೀವ್ರ ಮುಡುಕು ನೋವು, ಆರ್ಥೈಟಿನ್ ಹಾಗೂ ನಡೆಯಲಾರಿಕೆಯ ತೊಂದರೆಗಳನ್ನು ಅನುಭವಿಸುವವರಿಗೆ ಚಲನೆ, ಗೌರವ ಮತ್ತು ನಂಬಿಕೆಯನ್ನು ನೀಡುವ ಹೆಜ್ಜೆ.

KB 1ಸಂಪೂರ್ಣವಾಗಿ ಭಾರತದಲ್ಲೇ ಅಭಿಷ್ಕೃತರಾಗಿದ್ದು, ಭಾರತೀಯ ಜನರ ಮತ್ತು ಪರಿಸ್ಥಿತಿಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಈ ರೀತಿಯ ಉನ್ನತ ತಂತ್ರಜ್ಞಾನ ಹೊಂದಿದ ಧರಿಸಬಹುದಾದ ರೋಬೋಟಿಕ್ ಪರಿಹಾರವನ್ನು ಇಷ್ಟು ಕಡಿಮೆ ದರದಲ್ಲಿ ದಾನಿಗಳು ಅಥವಾ ಎನ್‌ ಜಿಒಗಳಿಂದ ಬೆಂಬಲ ದೊರಕಿದರೆ ಬಡವರಿಗೆ ಉಚಿತವಾಗಿ ನೀಡಲಾಗುವುದು ಎಂಬುದು ವಿಶ್ವದ ಮೊದಲ ಘಟನೆ. “ಇದು ವ್ಯಾಪಾರಿಕ ಉತ್ಪನ್ನವಲ್ಲ. ಇದು ಮಾನವೀಯತೆಗೆ ಸೇವೆ ಸಲ್ಲಿಸುವ ಮಿಷನ್. ಮಾನವ ಗೌರವ ಮತ್ತು ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಟ್ಟ ವ್ಯಕ್ತಿಯಾಗಿ, ನಾನು ಭಾರತದ ಅತ್ಯಂತ ಬಡ ವ್ಯಕ್ತಿಯೂ ಸಹ ಆತ್ಮವಿಶ್ವಾಸದಿಂದ ನಡೆಯಬೇಕೆಂಬ ಗುರಿ ಇಟ್ಟಿದ್ದೇನೆ. ಇದು ನಮ್ಮ ಮೊದಲ ಹೆಜ್ಜೆ ಇನ್ನೂ ಅನೇಕ ಹೊಸ ಅವಿಷ್ಕಾರಗಳು ಭಾರತವನ್ನು ಮುನ್ನಡೆಸಲು ಬರಲಿವೆ ಎಂದರು.

ಸಹಸಂಸ್ಥಾಪಕ ಮತ್ತು ಸಿಟಿಒ ಹರ್ಷವರ್ಧನ್ ಅವರು ಮಾತನಾಡಿ,  KB1 ಎಂಬುದು ಒಂದು ಧರಿಸಬಹುದಾದ ಯಂತ್ರದಂತೆ ಕಾರ್ಯನಿರ್ವಹಿಸುವ ರೋಬೋಟಿಕ್ ಕಾಲು ಬೆಂಬಲ ವ್ಯವಸ್ಥೆಯಾಗಿದ್ದು, ಅಸ್ತಿಯೋಆರ್ಥಿಟಿನ್ (ಸಂಧಿ ನೋವು) ಶಸ್ತ್ರಚಿಕಿತ್ಸೆ ಅಥವಾ ಗಾಯದ ನಂತರದ ಕಾಲು ಬಲಹೀನತೆ ನ್ಯೂರೋಮಸ್ಕುಲರ್ ತೊಂದರೆಗಳು, ವಯಸ್ಸಿನಿಂದ ಉಂಟಾಗುವ ನಡೆಯುವ ತೊಂದರೆ.  ಇದು ಬಳಕೆದಾರರು ಮನೆಗಳಲ್ಲಿ ಆಸ್ಪತ್ರೆಗಳಲ್ಲಿ ಅಥವಾ ಹೊರಗಡೆ ಸಹ ಸುರಕ್ಷಿತವಾಗಿ, ಸುಲಭವಾಗಿ, ಮತ್ತು ಹೆಚ್ಚು ಕಾಲ ನಡೆದು ತಿರುಗಾಡಲು ಸಹಾಯ ಮಾಡುತ್ತದೆ.

8 ಗಂಟೆಗಳ ಬ್ಯಾಟರಿ ದಿನವಿಡೀ ಬಳಸಬಹುದು ಧ್ವನಿ ನಿಯಂತ್ರಣ, ಮ್ಯಾನುಯಲ್ ಬಟನ್, ಮತ್ತು ಮೊಬೈಲ್ ಆಪ್ ನೋವನ್ನು ಕಡಿಮೆ ಮಾಡುತ್ತದೆ, ಭಾರತದಲ್ಲಿಯೇ ಸಂಪೂರ್ಣವಾಗಿ ತಯಾರಿಸಲ್ಪಟ್ಟಿದೆ . ಬಡವರು ಮತ್ತು ಅವಶ್ಯಕತೆಗೊಳಪಟ್ಟವರಿಗೆ ಸಹಾಯ ಮಾಡಲು ದಾನಿಗಳು, ಕಂಪನಿಗಳು ಮತ್ತು ಎನ್‌ ಜಿಒಗಳಿಂದ ಬೆಂಬಲ ದೊರೆತಲ್ಲಿ ನಾವು KB1ಅನ್ನು ಬಡ ಹಾಗೂ ಅವಶ್ಯಕತೆಗೊಳಪಟ್ಟವರಿಗೆ ಉಚಿತವಾಗಿ ನೀಡಲು ಬದ್ಧರಾಗಿದ್ದೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಡಾ. ಮಾಲಿನಿ , ಭಾಗ್ಯಾಶ್ರೀ ಉಪಸ್ಥಿತರಿದ್ದರು .

Key words: Vistarik Robotics Private Limited, new invention, KB1,  unveiled, Mysore