ಕಾವೇರಿ ನಮ್ಮೆಲ್ಲರ ತಾಯಿ : ಕೂಡಲೇ ತಮಿಳುನಾಡಿಗೆ ನೀರು ಬಿಡುವುದನ್ನ ನಿಲ್ಲಿಸಿ- ಶಾಸಕ ಜಿ.ಟಿ ದೇವೇಗೌಡ ಆಗ್ರಹ.

ಮಂಡ್ಯ,ಸೆಪ್ಟಂಬರ್,2,2023(www.justkannada.in): ಕಾವೇರಿ ನಮ್ಮೆಲ್ಲರ ತಾಯಿ. ಬದುಕಲು ಕಾವೇರಿ ನೀರು ಬೇಕು. ಕೂಡಲೇ ತಮಿಳುನಾಡಿಗೆ ನೀರು ಬಿಡುವುದನ್ನ ನಿಲ್ಲಿಸಿ ಎಂದು ರಾಜ್ಯ ಸರ್ಕಾರಕ್ಕೆ ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ಆಗ್ರಹಿಸಿದರು.

ಮಂಡ್ಯದಲ್ಲಿ ಇಂದು ಮಾತನಾಡಿದ ಶಾಸಕ ಜಿ.ಟಿ ದೇವೇಗೌಡ, ಹೊಸ ಸರ್ಕಾರ ಬಂದು 3 ತಿಂಗಳಾಗಿದೆ.  ಬೆಂಗಳೂರಿನಲ್ಲಿ ಕುಡಿಯಲು ನೀರಿಲ್ಲ ಕಾವೇರಿ ನೀರಿಗಾಗಿ ಬೆಂಗಳೂರಿನಲ್ಲಿ ಯಾವ ಹೋರಾಟ ನಡೆಯುತ್ತಿಲ್ಲ. ನೀರು ಇಲ್ಲದೆ ಉಳಿಯುತ್ತೀರಾ  ರೈತರ ಹೋರಟಕ್ಕೆ ಬನ್ನಿ ಎಂದು ಮನವಿ ಮಾಡಿದರು.

ಕಾಂಗ್ರೆಸ್ ಸರ್ಕರ ರೈತರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ ತಮಿಳುನಾಡಿನಲ್ಲಿ ಒಗ್ಗಟ್ಟು ಇದೆ. ಆದರೆ ನಮ್ಮಲ್ಲಿ ಒಗ್ಗಟ್ಟು ಯಾಕಿಲ್ಲ ಎಂದರು.

Key words: Kaveri –  Stop- releasing water – Tamil Nadu – MLA -GT Deve Gowda