ಕಾಶಿ, ಮಥುರಾದಲ್ಲೂ ಮಸೀದಿ ಹೋಗಿ ಮಂದಿರ ಬರಬೇಕು- ವಿವಾದಾತ್ಮಕ ಹೇಳಿಕೆ ನೀಡಿದ ಸಚಿವ ಕೆ.ಎಸ್ ಈಶ್ವರಪ್ಪ…

ಶಿವಮೊಗ್ಗ,ಆ,5,2020(www.justkannada.in):  ಕಾಶಿ ಹಾಗೂ ಮಥುರಾದಲ್ಲಿಯೂ ಮಸೀದಿ ಹೋಗಿ ಮಂದಿರ ಬರಬೇಕು. ಗುಲಾಮ ಸಂಕೇತ ಮಸೀದಿ ಹೋಗಿ ಮಂದಿರ ಬರಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.jk-logo-justkannada-logo

ಇಂದು ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದರು. ಈ ನಂತರ ಶಿವಮೊಗ್ಗದಲ್ಲಿ ಇಂದು ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ, ಕಾಶಿ ಮಥುರಾಗೆ ಹೋದರೇ ಮಸೀದಿಯನ್ನ ಕಾಣುತ್ತೇವೆ. ಮಸೀದಿಯನ್ನ ನೋಡಿದರೇ  ಗುಲಾಮರೆಂಬ ಭಾವನೆ ಬರುತ್ತದೆ. ಶ್ರದ್ಧಾಕೇಂದ್ರ, ಮಂದಿರ ಧ್ವಂಸಗೊಳಿಸಿ ಮಸೀದಿ ಕಟ್ಟಿದ್ದಾರೆ. ಹೀಗಾಗಿ ಮಥುರಾ ಕಾಶಿಯಲ್ಲೂ ಮಸೀದಿ ಜಾಗದಲ್ಲಿ ಮಂದಿರ ಬರಬೇಕು ಎಂದು ಹೇಳಿದರು.kashi-mathura-mosque-minister-ks-eshwarappa-controversial-statement

ಅಯೋಧ್ಯೆಯಲ್ಲಿ  ಮಸೀದಿ ತೆರವುಗೊಳಿಸಿ ರಾಮ ಮಂದಿರ ನಿರ್ಮಾಣ ಆಗಬೇಕು ಎಂಬುವುದು ಬಹುಸಂಖ್ಯಾತ ಹಿಂದೂಗಳ ಆಸೆಯಾಗಿತ್ತು, ಅದು ಈಗ ಈಡೇರಿದೆ. ಅಯೋಧ್ಯೆಯಲ್ಲಿ ಗುಲಾಮ ಸಂಕೇತ ಮಸೀದಿ ತೆರವು ಮಾಡಲಾಗಿದೆ.  ಅದೇ ರೀತಿಯಲ್ಲಿ ಕಾಶಿ ಹಾಗೂ ಮಥುರಾದಲ್ಲಿ ಇರುವ ಮಸೀದಿ  ಹೋಗಿ ಮಂದಿರ ಬರಬೇಕು  ಎಂದು ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದರು.

Key words: Kashi- Mathura- mosque -Minister -KS Eshwarappa – controversial- statement.