ನಾಳೆ ನಟ ಪುನೀತ್ ರಾಜ್ ಕುಮಾರ್ ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ: ಅಧಿಕೃತವಾಗಿ ಅಪ್ಪು ಕುಟುಂಬಕ್ಕೆ ಆಹ್ವಾನ.

ಬೆಂಗಳೂರು,ಅಕ್ಟೋಬರ್,31,2022(www.justkannada.in): ಕರುನಾಡ ಯುವರತ್ನ ನಟ ದಿ. ಪುನೀತ್ ರಾಜ್ ಕುಮಾರ್ ಅವರಿಗೆ ನಾಳೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು ಪುನೀತ್ ಅವರ ಕುಟುಂಬಕ್ಕೆ ಸರ್ಕಾರದ ವತಿಯಿಂದ ಅಧಿಕೃತ ಆಹ್ವಾನ ನೀಡಲಾಯಿತು.

ಸದಾಶಿವನಗರದ ನಟ ಅಪ್ಪು ನಿವಾಸಕ್ಕೆ ಸಚಿವರಾದ ಆರ್.ಅಶೋಕ್ ಮತ್ತು ಸುನೀಲ್ ಕುಮಾರ್ ಭೇಟಿ ನೀಡಿ  ನಾಳಿನ ಸಮಾರಂಭಕ್ಕೆ ಆಗಮಿಸುವಂತೆ ಅಧಿಕೃತ ಆಹ್ವಾನ ನೀಡಿದರು. ಹಾಗೆಯೇ ಹಿರಿಯ ನಟ ರಾಘವೇಂದ್ರ ರಾಜ್ ಕುಮಾರ್ ಹಾಗೂ  ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರಿಗೆ ಶಾಲು ಹೊದಿಸಿ ಸನ್ಮಾನ ಮಾಡಲಾಯಿತು.

ನಾಳೆ ಸಂಜೆ 5 ಗಂಟೆಗೆ ವಿಧಾನಸೌಧದ ಮುಂಭಾಗ ಅದ್ಧೂರಿ ಸಮಾರಂಭ ನಡೆಯಲಿದ್ದು ನಟ ಪುನೀತ್ ರಾಜ್ ಕುಮಾರ್ ಪರವಾಗಿ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಕರ್ನಾಟಕ ರತ್ನ ಪ್ರಶಸ್ತಿ ಸ್ವೀಕರಿಸಲಿದ್ದಾರೆ.  ಸಮಾರಂಭಕ್ಕೆ ಹಿರಿಯ ನಟ  ರಜಿನಿಕಾಂತ್ ನಟ  ಜ್ಯೂ.ಎನ್ ಟಿ ಆರ್ ಹಾಗೂ ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಡಾ. ಸುಧಾಮೂರ್ತಿ  ಅವರನ್ನ ಅತಿಥಿಗಳಾಗಿ ಆಹ್ವಾನಿಸಲಾಗಿದೆ.

Key words: Karnataka Ratna award – actor -Punith Rajkumar-tomorrow- Official- invitation

ENGLISH SUMMARY…

Puneeth Rajkumar to be given Karnataka Ratna posthumously tomorrow: Official invitation to Appu’s family
Bengaluru, October 31, 2022 (www.justkannada.in): Late actor Dr. Puneeth Rajkumar will be bestowed with the prestigious Karnataka Ratna award posthumously tomorrow. The family members were invited officially today to the program.
Ministers R. Ashok and Sunil Kumar visited Appu’s residence at Sadashivanagara today and invited Ashwini Puneeth Rajkumar to attend the program tomorrow.
A grand function has been organized tomorrow in front of the Vidahana Soudha at 5.00 pm. Appu’s wife Ashwini Puneeth Rajkumar will receive the award. Thespian Rajnikanth, Tollywood’s popular actor Junior NTR and Dr. Sudha Murthy, Chairman, Infosys Foundation have been invited as the chief guests.
Keywords: Puneeth Rajkumar/ Karnataka Ratna award/ Rajyotsava