ಕರವೇ ಪ್ರತಿಭಟನೆ ವಿಚಾರ: 10 ಎಫ್ ಐಆರ್ : 53 ಜನರ ಬಂಧನ- ಪೊಲೀಸ್ ಆಯುಕ್ತ​​ ಬಿ. ದಯಾನಂದ್.

ಬೆಂಗಳೂರು, ಡಿಸೆಂಬರ್​, 28,2023(www.justkannada.in):  ಬೆಂಗಳೂರಿನಲ್ಲಿ ಕಡ್ಡಾಯ ಕನ್ನಡ ಫಲಕ ಹಾಕುವಂತೆ ಆಗ್ರಹಿಸಿ ನಡೆದ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ ಸಂಬಂಧ 10 ಎಫ್​ಐಆರ್​ ದಾಖಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.

ಇಂದು ಮಾತನಾಡಿದ ಪೊಲೀಸ್ ಆಯುಕ್ತ ಬಿ.ದಯಾನಂದ್,  ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ಸೇರಿ 53 ಜನರನ್ನ  ಬಂಧಿಸಿ ಮಾಡಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಶಾಂತಿಯುತ ಪ್ರತಿಭಟನೆಗೆ ಮಾತ್ರ ಅವಕಾಶವಿದೆ. ಕಾನೂನು ಸುವ್ಯವಸ್ಥೆ ಕದಡುವ ಕೆಲಸ ಮಾಡಬಾರದು ಎಂದು  ಹೇಳಿದರು.

ಹೊಸವರ್ಷ ದಿನಾಚರಣೆ ಆಚರಣೆಗೆ ಪೊಲೀಸ್ ಭದ್ರತೆ  ಕುರಿತು ಪ್ರತಿಕ್ರಿಯಿಸಿದ ಬಿ.ದಯಾನಂದ್ ಅವರು, ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಕಟ್ಟೆಚ್ಚರ ವಹಿಸಲಾಗಿದೆ. ಹೊಸ ವರ್ಷದಂದು ಡ್ರಂಕ್ ಮತ್ತು ಡ್ರೈವ್ ಟೆಸ್ಟ್ ಮಾಡಲಾಗುವುದು. ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಕಬ್ಬನ್ ​ಪಾರ್ಕ್ ​ನಲ್ಲಿ ಬಂದೋಬಸ್ತ್​​ ಕೈಗೊಳ್ಳಲಾಗುತ್ತದೆ. ನಗರದಾದ್ಯಂತ 400 ಸಿಸಿ ಕ್ಯಾಮರಾ ಅಳವಡಿಸಲಾಗುವುದು ಎಂದು  ತಿಳಿಸಿದರು.

Key words: Karnataka organization- protest – 10 FIR- Police Commissioner -B. Dayanand